ತುಮಕೂರು : ಸಂತ ಅಂಥೋನಿ ಚರ್ಚ್‍ಗೆ ಕನ್ನ : ಬಾಗಿಲು ಮುರಿದು ಹಣದ ಹುಂಡಿ ಕದ್ದ ಖದೀಮರು.!

ತುಮಕೂರಿನ ಸಂತ ಅಂಥೋನಿ ಚರ್ಚ್ ಗೆ ಕಳ್ಳರು ಕನ್ನ ಹಾಕಿದ್ದಾರೆ. ಸಂತ ಅಂಥೋನಿ ಚರ್ಚ್ ನ ಬಾಗಿಲು ಮುರಿದು, ಹಣದ ಹುಂಡಿಯನ್ನು ಕದ್ದೊಯ್ದಿರುವ ಘಟನೆ ತುಮಕೂರು ನಗರದ ಗೂಡ್ ಶೆಡ್ ಕಾಲೋನಿಯಲ್ಲಿ ನಡೆದಿದೆ. ತಡರಾತ್ರಿ ಕಳ್ಳರು ಹಾರೆಯಿಂದ ಬಾಗಿಲಿನ ಬೀಗ ಮುರಿದು , ಚರ್ಚ್ ನ ಒಳನುಗ್ಗಿ, ಕೈಗೆ ಸಿಕ್ಕ ವಸ್ತುಗಳು ಮತ್ತು ಹಣದ ಹುಂಡಿಯನ್ನು ಹೊತ್ತೊಯ್ದಿದ್ದಾರೆ.

ಇಂದು ಬೆಳಗ್ಗೆ ಚರ್ಚಿಗೆ ಫಾದರ್ ಬಂದ ಬಳಿಕ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಹೊಸಬಡಾವಣೆ ಫೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು , ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com