ಸೋಲಿನಿಂದ ಕಂಗೆಟ್ಟ ಕಾಂಗ್ರೆಸ್​ ಅಭ್ಯರ್ಥಿ : ಕಣ್ಣೀರಿನ ಮೊರೆ ಹೋದ ಲಕ್ಷ್ಮಣ

ಮೈಸೂರು : ಮತ ಹಾಕಿದ್ದ ಮತದಾರರಿಗೆ ಪರಾಜಿತ ಅಭ್ಯರ್ಥಿ ಲಕ್ಮಣ್ ಮಂಡಿಯೂರಿ ನಮಸ್ಕರಿಸಿದ್ದರು. ತಮ್ಮ ಸೋಲಿನಿಂದ ನೊಂದ ಕಾಂಗ್ರೆಸ್​ ಅಭ್ಯರ್ಥಿ ಲಕ್ಷ್ಮಣ್, ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗಳಗಳನೆ ಕಣ್ಣೀರಿಟ್ಟಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಕ್ಮಣ್​, ನಾನು ಕಳೆದ 6 ವರ್ಷಗಳಿಂದ ಶಿಕ್ಷಕರ ಪರವಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ.  ನಾನು ಸೋತಿದ್ದರೂ ಕೂಡಾ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಸದಾ ಸಿದ್ದನಿದ್ದೇನೆ. ಇದು ಸಮ್ಮಿಶ್ರ ಸರ್ಕಾರ,  ಇದರಲ್ಲೇನಾದರೂ ನಮ್ಮನ್ನು ಕಡೆಗಣಿಸಿ ಏಕ ಪಕ್ಷೀಯ ನಿರ್ಧಾರ ಕೈಗೊಂಡರೆ ಉಗ್ರ ಹೋರಾಟ ಮಾಡುತ್ತೇನೆ. ಹೋರಾಟ ಮಾಡಲು ನನಗೆ ಅನುಮತಿ ಸಿಕ್ಕಿದೆ. ಈ ವಿಷಯವನ್ನ ಸಿದ್ದರಾಮಯ್ಯನವರ ಗಮನಕ್ಕೆ ತಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಜಾತಿ ಆಧಾರದ ಮೇಲೆ ಮತಗಳ ವಿಂಗಡಣೆ ತುಂಬಾ ನೋವು ತಂದಿದೆ, ಎಂದು ಗೋಷ್ಟಿಯುದ್ದಕ್ಕೂ‌ ಲಕ್ಷ್ಮಣ್  ಹಾಗೂ ಅವರ ಆಪ್ತರು ಕಣ್ಣೀರಿಡುತ್ತಲೇ ಮಾತನಾಡಿದ್ದರು. ಬಳಿಕ ಮತನೀಡಿದ ಶಿಕ್ಷಕರಿಗೆ ಕೃತಜ್ಞತೆ ತಿಳಿಸಿ ನಮಸ್ಕರಿಸಿ ಅಳುತ್ತ  ಪತ್ರಿಕಾಗೋಷ್ಠಿಯಿಂದ ಹೊರನಡೆದರು.

 

 

 

 

 

 

Leave a Reply

Your email address will not be published.

Social Media Auto Publish Powered By : XYZScripts.com