ದಂಧೆಕೋರರ ಪರನಿಂತ ಸಿಪಿಐಗೆ ಅವಾಜ್ ಹಾಕಿದ್ದ ಪಿಎಸ್‌ಐ ‘ಸಿಂಗಂ‘ ಅಮಾನತು…!

ಬೆಂಗಳೂರು: ದಂಧೆಕೋರರ ಪರ ನಿಂತ ಮೇಲಾಧಿಕಾರಿಗೆ ‘ಸಿಂಗಂ’ ಶೈಲಿಯಲ್ಲಿ ಅವಾಜ್ ಹಾಕಿದ್ದ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಠಾಣೆ ಪಿಎಸ್‌ಐ ಶ್ರೀನಿವಾಸ್ ರನ್ನು ಅಮಾನತು ಮಾಡಲಾಗಿದೆ.

ಗ್ರಾನೈಟ್ ಸಾಗಿಸುತ್ತಿದ್ದ ಲಾರಿಯನ್ನು ಮುಟ್ಟುಗೋಲು ಹಾಕುವ ವಿಚಾರದಲ್ಲಿ ಸಿಪಿಐ ಜೊತೆ ವಾಗ್ವಾದ ನಡೆಸಿದ್ದ ಪಿಎಸ್‌ಐ ಶ್ರೀನಿವಾಸ್ ಇದೀಗ ಅಮಾನತು ಆಗಿದ್ದಾರೆ. ಪಿಎಸ್‌ಐ ಶ್ರೀನಿವಾಸ್ ಅಮಾನತ್ತು ಮಾಡಿ ಬೆಂಗಳೂರು ಗ್ರಾಮಾಂತರ ಎಸ್ಪಿ ಬೀಮಾಶಂಕರ್ ಗುಳೇದ್ ಆದೇಶ ಹೊರಡಿಸಿದ್ದಾರೆ.

ಲಾರಿ ಮಾಲೀಕರ ಪರ ಮಾತನಾಡಿದಕ್ಕೆ ಆಕ್ರೋಶಗೊಂಡು ಕಳೆದ ಭಾನುವಾರ ಶ್ರೀನಿವಾಸ್ ಮೇಲಾಧಿಕಾರಿಗೆ ಚಳಿ ಬಿಡಿಸಿದ್ದರು.ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ್ದ ಪಿಎಸ್‌ಐ ಅವಾಜ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿ, ಸಾರ್ವಜನಿಕರಿಂದ ಪಿಎಸ್‌ಐ ಕಾರ್ಯಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು.

ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಹಿನ್ನೆಲೆ ಹಿರಿಯ ಅಧಿಕಾರಿ ವಿರುದ್ದ ಅಸಭ್ಯ ವರ್ತನೆ ಮಾಡಿದ್ದಾರೆ ಅಂತ ಪಿಎಸ್​ಐ ಅಮಾನತ್ತು ಮಾಡಲಾಗಿದೆ ಎನ್ನಲಾಗುತ್ತಿದೆ. ಸಿಂಗಂರನ್ನು ಅಮಾನತು ಮಾಡಿರುವುದಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.

 

 

Leave a Reply

Your email address will not be published.