ಲಿಂಗಾಯತ ಧರ್ಮ ಈಗ ಸಂದಿಗ್ಧ ಪರಿಸ್ಥಿತಿಯಲ್ಲಿದೆ : ನಾಗನೂರು ಮಠದ ಸ್ವಾಮೀಜಿ ಹೇಳಿಕೆ

ಬೆಳಗಾವಿ : ‘ ಲಿಂಗಾಯತ ಧರ್ಮ ಈಗ ಸಂದಿಗ್ಧ ಪರಿಸ್ಥಿತಿಯಲ್ಲಿ ಇದೆ. ಲಿಂಗಾಯತರು ಕಷ್ಟದ ದಿನಗಳಲ್ಲಿ ಕಳೆಯುತ್ತಿದ್ದಾರೆ ‘ ಎಂದು ಬೆಳಗಾವಿಯಲ್ಲಿ ಡಾ. ಸಿದ್ದರಾಮ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ‘ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಆಗ್ರಹಿಸಿ ನಾವೇಲ್ಲ ಪ್ರತಿಭಟನೆ ಮಾಡಿದ್ದೇವೆ. ನಮ್ಮೆಲ್ಲರ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರ ಆಯೋಗವೊಂದನ್ನು ರಚನೆ ಮಾಡಿತ್ತು ‘ ಎಂದು ಹೇಳಿದ್ದಾರೆ.

‘ ಸರ್ಕಾರ ಸತ್ಯ ಶೋಧನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಕೇಂದ್ರದ ಸರ್ಕಾರದಿಂದ ಲಿಂಗಾಯತ ಪ್ರತ್ಯೇಕ ಧರ್ಮದ ಶಿಫಾರಸು ವಾಪಸ್ ಬಂದಿದೆ ಎಂದು ಸುದ್ದಿಯಾಗಿದೆ. ಆದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಲ್ಪ ಸಂಖ್ಯಾತ ಇಲಾಖೆಯಲ್ಲಿ ಪ್ರಶ್ನಿಸಿದರೆ. ಅಂತಹ ಯಾವುದೇ ಕಡತ ವಾಪಸ್ ಬಂದಿಲ್ಲ ಎನ್ನುತ್ತಿದ್ದಾರೆ ‘ ಎಂದಿದ್ದಾರೆ.

ಲಿಂಗಾಯತ ಧರ್ಮದ ಶಿಫಾರಸು ವಾಸಪ್ ಸುದ್ದಿ ಕೇಳಿ ಪಂಚ ಪೀಠಾಧೀಶರು ಸಂಭ್ರಮಿಸುತ್ತಿದ್ದಾರೆ. ಪಂಚ ಪೀಠಾದೀಶರಿಗೆ ಲಿಂಗಾಯತ ಪ್ರತ್ಯೆಕ ಧರ್ಮ, ನಮ್ಮ ಘನತೆ, ಗೌರವ ಬೇಕಾಗಿಲ್ಲ. ನಾವೇಲ್ಲ ಎಚ್ಚರವಾಗಿರಬೇಕು. ನಾವು ಮೈ ಮರತೆರೆ ಇದು ವರೆಗೆ ಮಾಡಿದ ಪ್ರಯತ್ನ ವ್ಯರ್ಥ ವಾಗಲಿದೆ. ಲಿಂಗಾಯತ ಎಚ್ಚರವಾಗಿರಬೇಕು ‘ ಎಂದು ಲಿಂಗಾಯತ ಸಮೂದಾಯದ ಕಾರ್ಯಕ್ರಮದಲ್ಲಿ ನಾಗನೂರು ರುದ್ರಾಕ್ಷಿ ಮಠದ ಡಾ.‌ಸಿದ್ದರಾಮ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.