ಮೈಸೂರು ವಿವಿ ನೂತನ ಕುಲಸಚಿವರಾಗಿ ಡಾ.ಆರ್ ರಾಜಣ್ಣ ಅಧಿಕಾರ ಸ್ವೀಕಾರ

ಮೈಸೂರು ವಿಶ್ವವಿದ್ಯಾ ನಿಲಯದ ನೂತನ ಕುಲಸಚಿವರಾಗಿ ಡಾ.ಆರ್ ರಾಜಣ್ಣ ಅಧಿಕಾರ ಸ್ವೀಕಾರಿಸಿದ್ದಾರೆ. ನಿರ್ಗಮಿತ ಕುಲಸಚಿವೆ ಭಾರತಿಯಿಂದ ಅಧಿಕಾರ ಸ್ವೀಕರಿಸಿದ ಬಳಿಕ ಕುಲಸಚಿವ ರಾಜಣ್ಣ ಹೇಳಿಕೆ ನೀಡಿದ್ದಾರೆ. ‘ಮೈಸೂರು ವಿವಿ ಅಭಿವೃದ್ಧಿ ಕಡೆ ಮೊದಲ ಆದ್ಯತೆ. ವಿವಾದಗಳ ಬಗ್ಗೆ ನಾನು ಮಾತನಾಡಲ್ಲ. ಹಳೆಯದೆಲ್ಲವೂ ಮುಗಿದ ಕಥೆ. ಸರ್ಕಾರ ನನ್ನ ಮೇಲೆ ನಂಬಿಕೆ ಇಟ್ಟು ಕುಲಸಚಿವರ ಹುದ್ದೆ ನೀಡಿದೆ ‘ ಎಂದಿದ್ದಾರೆ.

‘ ಮೂರನೇ ಬಾರಿಗೆ ನಾನು ಓದಿದ ವಿವಿಯಲ್ಲಿ ಕುಲಸಚಿವನಾಗಿದ್ದು ಸಂತಸ ತಂದಿದೆ. ಮುಂದೆ ವಿವಿ ಸಿಬ್ಬಂದಿಗಳ ಸಹಕಾರದಿಂದ ಕೆಲಸ ಮಾಡ್ತೀನಿ ‘ ಎಂದು ನೂತನ ಕುಲಸಚಿವ ಡಾ. ಆರ್. ರಾಜಣ್ಣ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com