ವಿದ್ವತ್ ಮೇಲಿನ ಹಲ್ಲೆ ಪ್ರಕರಣ : ಮೊಹಮ್ಮದ್ ನಲಪಾಡ್‍ಗೆ ಶರತ್ತುಬದ್ಧ ಜಾಮೀನು ಮಂಜೂರು

ಪರ್ಜಿ ಕೆಫೆಯಲ್ಲಿ ನಡೆದ ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮೊಹಮ್ಮದ್ ನಲಪಾಡ್ ಗೆ ಇಂದು ಜಾಮೀನು ದೊರಕಿದೆ
ಬಹಳ ಸಾರಿ ಈತನ ಜಾಮೀನು ತಿರಸ್ಕರಿಸಿಲಾಗಿತ್ತು. 116 ದಿನಗಳ ಜೈಲು ವಾಸದ ನಂತರ ಇಂದು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ನೇತೃತ್ವದ ನ್ಯಾಯಪೀಠ ಜಾಮೀನು ಮಂಜೂರು ಮಾಡಿತು.

2 ಲಕ್ಷ ಬಾಂಡ್ ಮತ್ತು ಇಬ್ಬರು ಜಾಮೀನುದಾರರು ಶರತ್ತುಬದ್ದ ಜಾಮೀನು ಮಂಜೂರು ಮಾಡಲಾಗಿದೆ. ವಿದೇಶಕ್ಕೆ ತೆರಳುವಂತಿಲ್ಲ, ಪಾಸ್ಪೋರ್ಟ್ ಒಪ್ಪಿಸುವದು, ಸಾಕ್ಷಿ ನಾಶಮಾಡದಂತೆ ಮತ್ತು ಒತ್ತಡ ಹೇರದಂತೆ ನೀಡಿರುವ ಶರತ್ತುಬದ್ದ ಜಾಮೀನು ಇದಾಗಿದ್ದು, ನ್ಯಾಯಾಲಯ ಅನುಮತಿ ಇಲ್ಲದೆ ಬೆಂಗಳೂರು ಬಿಟ್ಟು ತೆರಳುವಂತಿಲ್ಲ.

ಷರತ್ತು ಉಲ್ಲಂಘಿಸಿದರೆ ಜಾಮೀನು ಹಿಂಪಡೆಯುವ ಸಾಧ್ಯತೆ ಇದೆ. ಸಂಜೆ ವೇಳೆಗೆ ನಲಪಾಡ್ ಹೊರಬರಬಹುದು.

Leave a Reply

Your email address will not be published.

Social Media Auto Publish Powered By : XYZScripts.com