ಜಯನಗರದಲ್ಲಿ ಬಿಜೆಪಿ ಸೋಲಿಗೆ ಜೆಡಿಎಸ್-ಕಾಂಗ್ರೆಸ್ ಒಳಒಪ್ಪಂದವೇ ಕಾರಣ : ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ – ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಪಕ್ಷದೊಂದಿಗೆ ಸರ್ಕಾರ ರಚಿಸಲು ಬೇಷರತ್ ಬೆಂಬಲ ನೀಡಿತ್ತು. ನಂತರದ ದಿನಗಳಲ್ಲಿ 50-50 ಸರ್ಕಾರ, ಸ್ಪೀಕರ್ ಸ್ಥಾನ ಹಾಗೂ ಸಚಿವ ಸ್ಥಾನ ಬೇಕು ಎಂದು ಬ್ಲಾಕ್ ಮೇಲ್ ಮಾಡಿದ್ದಾರೆ ‘ ಎಂಧು ಹೇಳಿದ್ದಾರೆ.

‘ ಕಾಂಗ್ರೆಸ್ ಪಕ್ಷದ ಕೆಲ ನಾಯಕರೆ ಕಾಂಗ್ರೆಸ್ ಪಕ್ಷದ ವಿರುದ್ದ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಕುತಂತ್ರ ರಾಜಕಾರಣ ಮಾಡುತ್ತಿದೆ. ಇತಿಹಾಸದಲ್ಲೇ ಕಾಂಗ್ರೆಸ್ ಪಕ್ಷ ಇತಂಹ ದುಸ್ಥಿತಿಗೆ ಬಂದಿದ್ದನ್ನ ನಾನು ನೋಡಿಲ್ಲ’ ಎಂದಿದ್ದಾರೆ.

‘ ಜಯನಗರ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ಕಾಂಗ್ರೆಸ್ ಮತ್ರು ಜೆಡಿಎಸ್ ಒಳ ಒಪ್ಪಂದ ಕಾರಣ. ಅವರಿಬ್ಬರು ಒಪ್ಪಂದ ಮಾಡಿಕೊಂಡ ಕಾರಣ ನಾವು 2900 ಮತಗಳ ಅಂತರದಲ್ಲಿ ಸೋಲನ್ನ ಕಂಡಿದ್ದೇವೆ ‘ ಎಂದು ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com