FIFA Football : ಫುಟ್ ಬಾಲ್ ಸುತ್ತಣ ಸುದ್ಧಿ ಸ್ವಾರಸ್ಯ: ಲೈಟ್ ರೀಡಿಂಗ್ ….

ನಾಗೇಶ್ ಕೆ ಎನ್

ಇಂದಿನಿಂದ ರಷ್ಯಾದಲ್ಲಿ ಫಿಫಾ ವಿಶ್ವಕಪ್ ಫುಟ್ ಬಾಲ್ ಆರಂಭ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 6.30 ಕ್ಕೆ ಉದ್ಘಾಟನೆ, 8.30 ಕ್ಕೆಉದ್ಘಾಟನಾ ಪ್ರಂದ್ಯ ಆರಂಭವಾಗಲಿದೆ.

ಅಂದಹಾಗೆ ಫುಟ್ ಬಾಲ್ ವಿಶ್ವಕಪ್ ಸುತ್ತಣ ಕೆಲವ ಸ್ವಾರಸ್ಯಕರ ಸಂಗತಿಗಳು ನಿಮ್ಮ ಓದಿನ ಖುಷಿಗಾಗಿ.

ಫಟ್ ಬಾಲ್ ಆಟಗಾರರು ವಿಶ್ವಕಪ್ ಮುಗಿಯುವವರೆಗೆ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗದಿರಲು ಕೋಚ್ ಗಳು ಸೂಚಿಸಿದ್ದಾರೆ. ತಿಥಿ ಸಿನೆಮಾ ಗಡ್ಡಪ್ಪನಿಗೆ ಹೇಳಿದ್ದರೆ ಸರಿ ಬಿಡು. ಆಯ್ತು ಬಿಡು. ಅಂದಿರುತ್ತಿದ್ದ. ಆಟಗಾರರೇನು ಹೇಳಿದ್ರೋ ಗೊತ್ತಿಲ್ವೇ..,

ಪ್ರಪಂಚದ ಶೇಕಡಾ 50 ರಷ್ಟು ಜನ ಫಿಫಾ ಫುಟ್ ಬಾಲ್ ಪಂದ್ಯಾವಳಿಗಳನ್ನು ವೀಕ್ಷಿಸುತ್ತಾರೆ. ನಾ ಬರಾಕಿಲ್ಲ, ನಾ ನೋಡಕಿಲ್ಲ ಅನ್ನೋಕೆ ಅವರೆಲ್ಲಾ ಏನ್ ಗಡ್ಡಪ್ಪನೇ.

ಕೆಲವು ವರದಿಗಳ ಪ್ರಕಾರ ಪುಟ್ ಬಾಲ್ ವಿಶ್ವಕಪ್ ಪಂದ್ಯಾವಳಿಗಳನ್ನು ಆಯೋಜಿಸುವ ದೇಶದಲ್ಲಿ ಜನನ ಪ್ರಮಾಣ ಹೆಚ್ಚಾಗುತ್ತದೆ. ಇದರ ಮರ್ಮ ನಮಗಂತೂ ತಿಳೀತಿಲ್ಲ.

ಬ್ರೆಜ಼ಿಲ್ ದೇಶ ಸುಮಾರು 5 ಬಿಲಿಯನ್ ಡಾಲರ್ ಖರ್ಚು ಮಾಡಿ ವಿಶ್ವಕಪ್ ನಡೆಸಿ ದಾಖಲೆ ನಿರ್ಮಿಸಿದೆ. ಅಬ್ಬಬ್ಬಬ್ಬಬ್ಬಾ. ಆಯ್ತು ಬಿಡು. ಸರಿ ಬಿಡೂ.

1950 ರಲ್ಲಿ ಭಾರತ ವಿಶ್ವಕಪ್ ನಲ್ಲಿ ಭಾಗವಹಿಸುವುದರಿಂದ ಹಿಂದುಳಿಯಿತು. ಅದಕ್ಕೆ ಕಾರಣ ಬರಿಗಾಲಲ್ಲಿ ಆಡಲು ಬಿಡುವುದಿಲ್ಲ ಫುಟ್ ಬಾಲ್ ಶೂ ಹಾಕಬೇಕು ಎಂಬ ಕಾರಣ ಕಂಡಿತಾದರೂ ಬ್ರೆಜ಼ಿಲ್ ಗೆ ಹಾರಲು ಹೆಚ್ಚಿನ ಹಣ ಬೇಕಾಯಿತು, ಹಾಗಾಗೆ ಹಿಂದೆ ಸರಿದರು. ಬರ ಅಂಬೋದು ಮರೇಲಿ ನಿಂತು ದೇಶ ನೇ ಕಾಡ್ತಿತ್ತು. ಇನ್ನು ಯಾವ ಆಟ ಸ್ವಾಮಿ.

1982 ರಲ್ಲಿ ನಾರ್ಮನ್ ವೈಟ್ ಸೈಡ್ ತನ್ನ 17 ನೇ ವಯಸ್ಸಿನಲ್ಲಿ ಫುಟ್ ಬಾಲ್ ವಿಶ್ವಕಪ್ ಆಡಿದ ಅತ್ಯಂತ ಕಿರಿಯ ಎನಿಸಿಕೊಂಡಿದ್ದಾರೆ. ವೆರಿ ಗುಡ್. ನಮ್ಮೂರಲ್ಲಿ ಎಸ್ಸಲ್ಸಿ ಪರೀಕ್ಷೆ ಬರೆದು ಐನಾತಿವು ಮೂರು ಪಾರ್ಟ್ ಫೇಲ್ ಆಗಿ, ತಿರ್ಗಾ ಪರೀಕ್ಷೆ ಕಟ್ಟಾಕೆ ಓಡಾಡ್ತಿರ್ತಾರೆ 17 ವರ್ಷದ ಐಕ್ಳು.

1950 ರಲ್ಲಿ 1,99, 854 ಮಂದಿ ಬ್ರೆಜ಼ಿಲ್ ನ ರಿಯೋ ದ ಸ್ಟೇಡಿಯಮ್ ನಲ್ಲಿ ಫುಟ್ ಬಾಲ್ ವೀಕ್ಷಿಸಿದ್ದರು. 1930 ರಲ್ಲಿ ಉರುಗ್ವೇ ನಲ್ಲಿ ಕೇವಲ 300 ಮಂದಿ ಪಂದ್ಯಕ್ಕೆ ಸಾಕ್ಷಿಯಾಗಿದ್ದರು. ಕೇವಲ 20 ವರ್ಷದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹರಡಿದ ‘ಸಾಂಕ್ರಾಮಿಕ’.

1942-1946 ಅವಧಿಯಲ್ಲಿ ಮಹಾಯುದ್ಧದ ಕಾರಣ ಫುಟ್ ಬಾಲ್ ವಿಶ್ವಕಪ್ ನಡೆದಿಲ್ಲ. ಮಖ ಮಖ ಸಿಂಡ್ರುಸ್ಕೊಂಡು ಬಾಂಬ್ ಎಸೀತಿದ್ರೆ ಆಡೋಕೆ ಮನಸ್ಸಾದ್ರೂ ಹೇಗೆ ಬರುತ್ತೆ. ಅಲ್ವೇ.,

2014 ರಲ್ಲಿ ರಷ್ಯಾದ ಕೋಚ್ ಫ್ಯಾಬಿಯೋ ಕೆಪೆಲ್ಲೋ ಅತಿ ಹೆಚ್ಚು ಸಂಭಾವನೆ ಪಡೆದವರು. ಅವರಿಗೆ 11, 235, 210 ಡಾಲರ್ ಸಂಭಾವನೆ ದೊರೆತಿತ್ತು.

ನಮ್ಗೇನ್ ಪಾರ್ಟಿ ಇಲ್ವಾ.,

Leave a Reply

Your email address will not be published.

Social Media Auto Publish Powered By : XYZScripts.com