ಧರ್ಮವನ್ನು ಸುಳ್ಳು ಹೇಳಿ ಮದುವೆಯಾದ ಯುವಕ : ನಿಜಾಂಶ ತಿಳಿದ ಪತ್ನಿ ಮಾಡಿದ್ದೇನು..?

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನಿವಾಸಿ ಯುವಕನೋರ್ವ ತನ್ನ ಧರ್ಮದ ಹೆಸರನ್ನು ಸುಳ್ಳು ಹೇಳಿ ಮೋಸದಿಂದ ಯುವತಿಯೊಬ್ಬಳನ್ನು ಮದುವೆಯಾಗಿದ್ದ. ತನ್ನ ಹೆಸರು ಅರುಣ್ ಪೂಜಾರಿ ಅಂತಾ ಹೇಳಿಕೊಂಡ ಸಯ್ಯದ್ ಎಂಬಾತ ಕಳೆದ 2 ವರ್ಷಘಳ ಹಿಂದೆ ಯುವತಿಯನ್ನು ವಿವಾಹವಾಗಿದ್ದ.  ಆದರೆ ಈಗ ಈತ ಮೋಸ ಮಾಡಿರುವ ವಿಷಯ ಪತ್ನಿಯೆದುರು ಬಯಲಾಗಿದೆ.

ಧರ್ಮವನ್ನು ಸುಳ್ಳು ಹೇಳಿ ಮದುವೆಯಾದ ಈ ಯುವಕನಿಗೆ ಧರ್ಮದೇಟು ಬಿದ್ದಿರುವ ಘಟನೆ ಮಂಗಳೂರು ಹೊರವಲಯದ ಕುಂಪಲ ಬಳಿಯ ಚಿತ್ರಾಂಜಲಿ ನಗರದಲ್ಲಿ ನಡೆದಿದೆ. ತಾನೇ ವಿವಾಹವಾಗಿದ್ದ ಪತ್ನಿ ಮತ್ತು ಆಕೆಯ ತಂಗಿಯಿಂದ ಯುವಕ ಹಿಗ್ಗಾಮುಗ್ಗಾ ಥಳಿತಕ್ಕೊಳಗಾಗಿದ್ದಾನೆ.

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ನಿವಾಸಿ ಸಯ್ಯದ್ ಪತ್ನಿಯಿಂದ ಹೊಡೆತ ತಿಂದಿದ್ದಾನೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಇನ್ನೊಂದು ಇದೇ ರೀತಿಯ ಪ್ರಕರಣ ಆತನ ಮೇಲೆ ದಾಖಲಾದಾಗ ಪತ್ನಿಗೆ ನಿಜಾಂಶ ತಿಳಿದಿದೆ. ಚೆನ್ನಾಗಿ ಥಳಿಸಿದ ಪತ್ನಿ ಸಯ್ಯದ್ ನನ್ನು ಉಳ್ಳಾಲ ಪೊಲೀಸರ ವಶಕ್ಕೆ ನೀಡಿದ್ದಾಳೆ.

Leave a Reply

Your email address will not be published.