WATCH : ಫಿಟ್ನೆಸ್ ವಿಡಿಯೋ ಹಂಚಿಕೊಂಡ PM : ಸಿ.ಎಂ ಕುಮಾರಸ್ವಾಮಿಗೆ ಮೋದಿ ಚಾಲೆಂಜ್

ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ ಸಿಂಗ್ ರಾಠೋಡ್ ‘ಹಮ್ ಫಿಟ್ ತೋ ಇಂಡಿಯಾ ಫಿಟ್’ ಎಂಬ ಹ್ಯಾಷ್ ಟ್ಯಾಗ್ ಬಳಸಿ ಟ್ವಿಟರಿನಲ್ಲಿ ಫಿಟ್ಬೆಸ್ ಚಾಲೆಂಜ್ ಅಭಿಯಾನ ಆರಂಭಿಸಿದ್ದರು. ಇದೇ ಅಭಿಯಾನದ ಅಡಿಯಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಫಿಟ್ನೆಸ್ ಚಾಲೆಂಜ್ ನೀಡಿದ್ದರು. ಅದನ್ನು ಸ್ವೀಕರಿಸಿದ್ದ ಮೋದಿ ಈಗ ತಾವು ವ್ಯಾಯಾಮ ಮಾಡುತ್ತಿರುವ ವಿಡಿಯೋ ಒಂದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.

ಅಲ್ಲದೇ, ಪ್ರಧಾನಿ ಮೋದಿ ಅಭಿಯಾನವನ್ನು ಮುಂದುವರೆಸಲು, ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಫಿಟ್ನೆಸ್ ಚಾಲೆಂಜ್ ಗಾಗಿ ನಾಮಿನೇಟ್ ಮಾಡಿದ್ದಾರೆ. 2018ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಟೇಬಲ್ ಟೆನಿಸ್ ಚಿನ್ನದ ಪದಕ ಗೆದ್ದ ಮಣಿಕಾ ಬತ್ರಾ ಅವರನ್ನೂ ಕೂಡ ಫಿಟ್ನೆಸ್ ಚಾಲೆಂಜ್ ಗಾಗಿ ನಾಮಿನೇಟ್ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com