ಪರಶುರಾಮ್ ಪರೋಕ್ಷ ಬೆಂಬಲಕ್ಕೆ ನಿಂತ ಹಿಂದೂ ಸಂಘಟನೆಗಳು.? ಸೋಶಿಯಲ್ ಮೀಡಿಯಾ ಕ್ಯಾಂಪೇನ್

ಭೀಮಾತೀರದ ಹಂತಕರಿಂದಲೇ ಕುಖ್ಯಾತಿ ಪಡೆದಿರುವ ವಿಜಯಪುರ ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ದೇಶಾದ್ಯಂತ ಬಾರಿ ಸುದ್ದಿಯಾಗಿದೆ. ಒಂದೆಡೆ ಗೌರಿ ಹಂತರನ್ನು ಬಂಧಿಸುವಲ್ಲಿ ಎಸ್​ಐಟಿ ಹಗಲಿರುಳು ಶ್ರಮಿಸುತ್ತಿದ್ದರೆ, ಇತ್ತ ಬಂಧಿತ ಪರಶುರಾಮ್ ವಾಗ್ಮೋರೆ ಪರ ಹಿಂದೂ ಸಂಘಟನೆಗಳು ಪರೋಕ್ಷವಾಗಿ ಬೆಂಬಲಕ್ಕೆ ನಿಂತಿವೆ. ಪ್ರಮೋದ್ ಮುತಾಲಿಕ್ ನಮಗೂ ಇದಕ್ಕೂ ಸಂಬಂಧ ಇಲ್ಲ ಎಂದಿದ್ದರೆ, ಅವರ ಕಾಯಕರ್ತರೇ ಪರಶುರಾಮ್ ಪರವಾಗಿ ಅಭಿಮಾನ ಮಾಡುತ್ತಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್ ಮೇಲೆ ಪೈರಿಂಗ್ ಮಾಡಿದ್ದಾನೆ ಎನ್ನಲಾದ ಸಿಂದಗಿ ಮೂಲದ ಪರಶುರಾಮ್ ವಾಘ್ಮೋರೆ ಎಸ್ಐಟಿ ವಶದಲ್ಲಿದ್ದಾನೆ. ಕ್ಷಣ ಕ್ಷಣಕ್ಕು ಬಂಧಿತರಿಂದ ಹೊಸ ಸ್ಪೋಟಕ ಸಂಗತಿಗಳು ಬಯಲಾಗ್ತಿವೆ. ಸ್ವತಃ ಪರಶುರಾಮ್ ವಾಘ್ಮೋರೆ ತನಿಖೆಯಲ್ಲಿ ಗುಂಡು ಹೊಡೆದದ್ದು ತಾನೇ ಎಂದು ಒಪ್ಪಿಕೊಂಡಿದ್ದಾನೆ. ಇಂತಹ ಪರಶುರಾಮ್ ವಾಗ್ಮೋರೆ ಪರವಾಗಿ ಹಿಂದೂ ಸಂಘಟನೆಗಳ ನಾಯಕರು ಬಹಿರಂಗವಾಗಿ ವಾದಕ್ಕಿಳಿದಿದ್ದಾರೆ. ಶ್ರೀರಾಮ ಸೇನೆಯ ವಿಜಯಪುರ ಜಿಲ್ಲಾ ಸಂಚಾಲಕ ನಿಲಕಂಠ ಕಂದಗಲ್ ಫೇಸ್ ಬುಕ್ ನಲ್ಲಿ ವಾಘ್ಮೋರೆ ಪೋಟೊ ಹಾಕಿ ಧರ್ಮ ರಕ್ಷಕ ಅಂತ ಹೊಗಳಿದ್ದಾರೆ. ಜೊತೆಗೆ ಮಾತೃಭೂಮಿ ರಕ್ಷಣೆಗೆ ನನ್ನ ಪ್ರಾಣ ಮುಡಿಪು ಅಂತ ಬರೆದಿದ್ದಾರೆ. ಇನ್ನು ಶ್ರೀರಾಮ ಸೇನೆ ಸಂಘಟನೆಯ ಸ್ವಾಮಿ ರಾಕೆಶ್ ಎನ್ನುವ ಫೇಸ್ಬುಕ್ ಅಕೌಂಟನಲ್ಲು ವಾಘ್ಮೋರೆ ಪೋಟೊ ಅಪಲೋಡ್ ಮಾಡಿ ಹಿಂದೂ ಹುಲಿ, ಧರ್ಮ ರಕ್ಷಕ ಅಂತ ಹಾಡಿ ಹೊಗಳಲಾಗಿದೆ. ಅಂಹಿಸೋ ಪರಮೋಧರ್ಮ, ಧರ್ಮ ಹಿಂಸಾ ತತೈವ ಚಾ ಅಂತ ಭಗವತ್ ಗೀತೆಯ ತುನುಕುಗಳನ್ನ ಹಾಕಿ, ನಾವು ಹತ್ಯೆಯನ್ನ ಸಮರ್ಥನೆ ಮಾಡಿಕೊಳ್ತಿಲ್ಲ ಎಂದು ಬರೆಯಲಾಗಿದೆ. ಇದು ವಾಘ್ಮೋರೆ ರಕ್ಷಣೆಗೆ ಶ್ರೀರಾಮ ಸೇನೆ ಸಂಘಟನೆಗೆ ನಿಂತಿದ್ಯಾ ಅಂತ ಅನುಮಾನ ಮೂಡಿಸುತ್ತಿದೆ. ಇನ್ನು ಬಂಧಿತ ಪರಶುರಾಮ ಶ್ರೀರಾಮ ಸೇನೆ ಸಂಘಟನೆಗೆ ಸಂಬಂಧಿಸಿದವನಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಇತ ಹಿಂದೂ ಸಂಘಟನೆ ಕಾರ್ಯಕರ್ತರ ಅನ್ನೋದನ್ನ ಇಡೀ ತಾಲೂಕಿನ ಜನರೇ ಹೇಳುತ್ತಾರೆ.

ಇತ್ತ ಪರಶುರಾಮ ವಾಗ್ಮೋರೆ ಬಂಧನದ ಬಳಿಕ ಆತನ ಕುಟುಂಬ ಕಣ್ಣಿರಲ್ಲಿ ಕೈತೊಳೆಯುತ್ತಿದ್ದರು, ಯಾವುದೆ ಸಂಘಟನೆಯ ನಾಯಕ ಅವರನ್ನು ಭೇಟಿ ಮಾಡಿಲ್ಲ. ಧರ್ಮದ ಅಫಿಮು ಹಚ್ಚಿಕೊಂಡ ಯುವಕ ವಿಚಾರಣೆ ಎದುರಿಸುತ್ತಿದ್ದಾನೆ. ಮೂಲಕ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನವನಾದ ಪರಶುರಾಮ ಆರು ವರ್ಷಗಳ ಹಿಂದೆ ಸಿಂಧಗಿಗೆ ಬಂದು ಸೈಬರ್ ಕೆಫೆ ನಡೆಸುತ್ತಾನೆ. ಆದರೆ ಅದರಿಂದ ಕುಟುಂಬ ನಿರ್ವಹಣೆ ಕಷ್ಟವಾದ ಕಾರಣ, ಅದನ್ನು ಬಿಟ್ಟು ತಂದೆ ತಾಯಿ ಜೊತೆ ಪಾತ್ರೆ ಮಾರಾಟ ಮಾಡುತ್ತಾ ಜೀವನ ನಡೆಸುತ್ತಿದ್ದರು. ಇದೀಗ ಆತನನ್ನು ಅಧಿಕಾರಿಗಳು ಕರೆದುಕೊಂಡು ಹೋದ ಬಳಿಕ ಕುಟುಂಬಸ್ಥರು ಕಂಗಾಲಾಗಿದ್ದು, ಮನೆ ನಿರ್ವಹಣೆಗೆ ಹಣವಿಲ್ಲದೆ ಒದ್ದಾಡುತ್ತಿದ್ದಾರೆ. ಆದರೆ ಹಿಂದೂ ಸಂಘಟನೆಗಳ ನಾಯಕರು ಪರಶುರಾಮ ಧರ್ಮ ರಕ್ಷಣೆಗೆ ಪ್ರಾಣ ನೀಡುತ್ತಾನೆ. ಆತ ಧರ್ಮ ರಕ್ಷಣೆ ಅಂತೆಲ್ಲ ಪ್ರಚಾರ ಮಾಡ್ತಾಯಿವೆ. ಆದರೆ ಆತನ ಕುಟುಂಬದ ಕಣ್ಣಿರು ಯಾವ ಹಿಂದೂ ಸಂಘಟನೆಯ ನಾಯಕರ ಕಣ್ಣಿಗೂ ಕಾಣುತ್ತಿಲ್ಲ.

ಅತ್ತ ವಿಚಾರಣೆಯಲ್ಲಿ ವಾಘ್ಮೋರೆ ಗೌರಿ ಹಂತಕ ಅಂತ ಒಪ್ಪಿಕೊಂಡಿದ್ದಾನೆ ಅಂತ ಹೇಳಲಾಗ್ತಿದೆ. ಆದ್ರೆ ಇತ್ತ ಪೋಷಕರು ಇದನ್ನ ತಳ್ಳಿ ಹಾಕಿದ್ರೆ, ಮತ್ತೊಂದೆಡೆ ಶ್ರೀರಾಮ ಸೇನೆ ಸಂಘಟನೆ ಕಾರ್ಯಕರ್ತರು ಪೇಸ್ ಬುಕ್ ಮೂಲಕ ಪರಶುರಾಮ್ ಪರ ಕ್ಯಾಂಪೆನ್ ಶುರು ಮಾಡಿಕೊಂಡಿದ್ದಾರೆ. ಸಧ್ಯ ಈ ಪ್ರಕರಣ ಮುಂದೆನಾಗುತ್ತೆ.? ಮತ್ಯಾರು ಎಸ್ ಐಟಿ ಬೀಸುತ್ತಿರೋ ಬಲೆಗೆ ಬೀಳ್ತಾರೆ ಅನ್ನೋದನ್ನ ಕಾದುನೋಡ ಬೇಕಾಗಿದೆ.

 

Leave a Reply

Your email address will not be published.