ಎಂ.ಬಿ ಪಾಟೀಲ್ ನಿವಾಸಕ್ಕೆ ದಿನೇಶ್ ಗುಂಡೂರಾವ್ ಭೇಟಿ : ಅತೃಪ್ತ ಶಾಸಕರ ಮನವೊಲಿಕೆಗೆ ಯತ್ನ?

ಕಾಂಗ್ರೆಸ್ ನಲ್ಲಿ ಅತೃಪ್ತರನ್ನು ಸಮಾಧಾನ ಪಡಿಸಲು ಕೈ ನಾಯಕರ ಶತ ಪ್ರಯತ್ನ ನಡೆಯುತ್ತಿದೆ. ಡಿಕೆಶಿ ಮನವೊಲಿಕೆ ಬೆನ್ನೆಲ್ಲೆ ದಿನೇಶ್ ಗುಂಡೂರಾವ್ ರಿಂದ ಮನವೊಲಿಕೆ ಯತ್ನ ನಡೆದಿದೆ. ಅತೃಪ್ತ ಶಾಸಕ ಎಂ ಬಿ ಪಾಟೀಲ್ ನಿವಾಸಕ್ಕೆ ದಿನೇಶ್ ಗುಂಡೂರಾವ್ ಭೇಟಿ ನೀಡಿದ್ದಾರೆ.

ಸದಾಶಿವನಗರದಲ್ಲಿರುವ ಎಂ ಬಿ ಪಾಟೀಲ್ ‌ನಿವಾಸಕ್ಕೆ ಭೇಟಿ ನೀಡಿ ಎಂ ಬಿ ಪಾಟೀಲ್ ‌ರನ್ನು ಮನವೊಲಿಸಲು ಯತ್ನಿಸಿದ್ದಾರೆ. ‘ಪಕ್ಷದಲ್ಲಿ ‌ನಿಮಗೆ ಸೂಕ್ತ ಸ್ಥಾನ ಸಿಗಲಿದೆ. ಸ್ವಲ್ಪ ದಿನ ಕಾಯಿರಿ ಎಲ್ಲವು ಒಳ್ಳೆಯದಾಗುತ್ತೇ ಎಂದು ಸಮಧಾನ ಪಡಿಸುತ್ತಿದ್ದಾರೆ.

ಎಂ ಬಿ ಪಾಟೀಲ್ ಭೇಟಿ ಬಳಿಕ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಹೇಳಿಕೆ ನೀಡಿದ್ದು ‘ ಎಂ ಬಿ ಪಾಟೀಲ್ ಸಮಧಾನದಿಂದ ಇದ್ದಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆ ಆಗಿದೆ. ಕೆಲವೊಂದು ಸಣ್ಣಪುಟ್ಟ ಸಮಸ್ಯೆ ಇರೋದು ಸಹಜ. ಸದ್ಯ ಎಲ್ಲ ಸಮಸ್ಯೆ ಬಗೆಹರಿದಿದೆ. ಎಂ‌ ಬಿ ಪಾಟೀಲ್ ನನ್ನ ಒಳ್ಳೆಯ ಸ್ನೇಹಿತರು. ಹೀಗಾಗಿ ಅವ್ರನ್ನ ಭೇಟಿ ಮಾಡಲು ಬಂದಿದ್ದೇನೆ, ನಮ್ಮಲ್ಲಿ ಯಾರು ಅತೃಪ್ತ ಶಾಸಕರು ಇಲ್ಲ. ನಾಳೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಹಾಗು ಸಿದ್ದರಾಮಯ್ಯ ಬೆಂಗಳೂರುನಲ್ಲಿ ಇರಲಿದ್ದಾರೆ. ಅವರ ಕೂಡ ಶಾಸಕರ ಜೊತೆ ಚರ್ಚೆ ಮಾಡಲಿದ್ದಾರೆ. ಸದ್ಯ ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com