ಫಿಫಾ ವಿಶ್ವಕಪ್-2018 : ಜಾಗತಿಕ ಫುಟ್ಬಾಲ್ ಮಹಾಸಮರಕ್ಕೆ ಕ್ಷಣಗಣನೆ..

ಜಾಗತಿಕ ಫುಟ್ಬಾಲ್ ಮಹಾಸಮರವೆಂದೇ ಬಿಂಬಿಸಲ್ಪಡುವ ಫಿಫಾ ವಿಶ್ವಕಪ್ – 2018 ಜೂನ್ 14, ಗುರುವಾರದಿಂದ ಆರಂಭಗೊಳ್ಳಲಿದೆ. ಜಗತ್ತಿನಾದ್ಯಂತ ಇರುವ ಕೋಟ್ಯಂತರ ಫುಟ್ಬಾಲ್ ಪ್ರೇಮಿಗಳಲ್ಲಿ ವಿಶ್ವಕಪ್ ಟೂರ್ನಿಯ ಆರಂಭಕ್ಕೂ ಮುನ್ನ ರೋಮಾಂಚಿತರಾಗಿದ್ದಾರೆ. ಲಿಯೊನೆಲ್ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ, ನೆಯ್ಮರ್ ಹೀಗೆ ತಮ್ಮ ತಮ್ಮ ಮೆಚ್ಚಿನ ಆಟಗಾರರ ಕಾಲ್ಚಳಕವನ್ನು ಕಣ್ತುಂಬಿಕೊಳ್ಳಲು ಕಾತರಾಗಿದ್ದಾರೆ.

Related image

Image result for Fifa world cup 2018

ರಷ್ಯಾ ರಾಜಧಾನಿ ಮಾಸ್ಕೋದ ಲುಝ್ನಿಕಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ರಷ್ಯಾ, ಸೌದಿ ಅರೇಬಿಯಾ ತಂಡವನ್ನು ಎದುರಿಸಲಿದೆ. ‘ಎ’ ಗುಂಪಿನ ಸದಸ್ಯರಾಗಿರುವ ರಷ್ಯಾ ಹಾಗೂ ಸೌದಿ ಅರೇಬಿಯಾ ನಡುವಣ ಪಂದ್ಯ ಭಾರತೀಯ ಕಾಲಮಾನ ರಾತ್ರಿ 8.30ಕ್ಕೆ ಆರಂಭಗೊಳ್ಳಲಿದೆ. ‘ಎ’ ಗುಂಪಿನಲ್ಲಿ ರಷ್ಯಾ, ಸೌದಿ ಅರೇಬಿಯಾ, ಈಜಿಪ್ಟ್ ಹಾಗೂ ಉರುಗ್ವೆ ತಂಡಗಳಿವೆ.

 

 

Leave a Reply

Your email address will not be published.

Social Media Auto Publish Powered By : XYZScripts.com