ಫಿಫಾ ವಿಶ್ವಕಪ್ 2018 : ಫುಟ್ಬಾಲ್ ರೋಮಾಂಚನಕ್ಕೆ ಕ್ಷಣಗಣನೆ ಆರಂಭ..

ಭಾರತದಲ್ಲಿ ಐಪಿಎಲ್​​ ಎಂಬ ಕ್ರೀಡಾ ಹಬ್ಬ ಮುಗಿದು ದಿನಗಳೆ ಕಳೆದಿವೆ.. ಇದೇ ಗುಂಗಿನಲ್ಲಿ ಭಾರತೀಯ ಅಭಿಮಾನಿಗಳು ಇದ್ದಾರೆ. ಆದ್ರೆ ಗುಂಗಿನ ನಶೆಯನ್ನು ಇಳಿಸಿ, ಫುಟ್ಬಾಲ್​ ಕಿಕ್​ ರೋಮಾಂಚನ ಹೆಚ್ಚಿಸಲು ಕ್ಷಣಗಣನೆ ಆರಂಭವಾಗಿದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಫಿಫಾ ವಿಶ್ವಕಪ್​ನ ಆತೀಥ್ಯ ವಹಿಸಿಕೊಂಡ ರಷ್ಯಾ ಸಕಲ ರೀತಿಯಿಂದಲೂ ಸಜ್ಜಾಗುತ್ತಿದೆ.
30 ದಿನಗಳ ಕಾಲ ನಡೆಯಲಿರುವ ಫಿಫಾ ವಿಶ್ವಕಪ್​​ನಲ್ಲಿ 64 ಪಂದ್ಯ ನಡೆಯಲಿವೆ. ಒಟ್ಟು 32 ತಂಡಗಳು 8 ವಿಭಾಗಗಳಲ್ಲಿ ಕಾದಾಟ ನಡೆಸಲಿದ್ದು, ರಷ್ಯಾದ 11ನಗರಗಳ 12 ಮೈದಾನದಲ್ಲಿ ಪಂದ್ಯ ಆಯೋಜಿಸಲಾಗಿದೆ. ಉದ್ಘಾಟನಾ ಹಾಗೂ ಫೈನಲ್​​ ಪಂದ್ಯ ಲುಝ್ನಿಕಿ ಅಂಗಳದಲ್ಲಿ ಜೂನ್​ 14 ರಂದು ನಡೆಯಲಿದೆ. ರಷ್ಯಾ ತನ್ನ ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಕಾದಾಟವನ್ನು ನಡೆಸಲಿದೆ.
ಒಟ್​​ಕ್ರಿಟ್​ ಅರಿನಾ, ಸೆಂಟ್​ ಪೀರ್ಟಸ್​​ಬರ್ಗ್​​​ ಮೈದಾನ, ಸೋಚಿ, ಸಮಾರ, ಖಜನಾ, ರೊಸ್ತೊವ್-ಆನ್-ಡಾನ್, ವಾಲ್ಗೋಗ್ರಾಡ್​​, ನಿಜ್ನಿ ನವ್ಗೊರೊಡ್, ವಾಲ್ಗೋಗ್ರಾಡ್​ ಅರಿನಾ, ಸರನ್ಸಕ್​, ಯಕಟೇನ್ಬರ್ಗ್, ಕಲಿನಿಗ್ರಾಡ್​​ ನಗರಗಳಲ್ಲಿ ಫಿಫಾ ವಿಶ್ವಕಪ್​​ ಆಯೋಜಿಸಲಾಗಿದೆ. ಇನ್ನು ಪ್ರಶಸ್ತಿ ಸುತ್ತಿನ ಕಾದಾಟ ಲುಝ್ನಿಕಿಯದಲ್ಲಿ ನಡೆಯಲಿದೆ.

Image result for Fifa world cup 2018
——————————————————————————————————————-
ಜಗತ್ತಿನ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಕ್ರೀಡೆಗಳಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳೋದು ಫುಟ್ಬಾಲ್​​.. ಈ ಆಟ ಮನಮೋಹಕ. ವಿಶ್ವದ ಸ್ಟಾರ್​ ಪ್ಲೇಯರ್​​​ಗಳನ್ನು ಒಂದೇ ಸೂರಿನಡಿ ನೋಡಲು ಅಭಿಮಾನಿಗಳು ಸಹ ಕಾತುರಾಗಿದ್ದಾರೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಫಿಫಾ ವಿಶ್ವಕಪ್​​ ಚಾಂಪಿಯನ್​ ಪಟ್ಟ ಅಲಂಕರಿಸೋಕೆ, ವರ್ಷವಿಡಿ ಮೈದಾನದಲ್ಲಿ ಬೆವರು ಹರಿಸುತ್ತಾರೆ. ಈ ಟೂರ್ನಿಯಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿದ ತಂಡಕ್ಕೆ ಭರ್ತಿ ನಾಲ್ಕು ವರ್ಷ ವಿಶ್ವದಲ್ಲಿ ರಾಜ ಮರ್ಯಾದೆ.
ಫೈನಲ್​​ ಕಾದಾಟದಲ್ಲಿ ಚಾಂಪಿಯನ್​ ತಂಡ ಫಿಫಾ ಟ್ರೋಫಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲಿದೆ. ಈ ಟ್ರೀಫಿಗೆ ತನ್ನದೇ ಆದ ಇತಿಹಾಸ ಇದೆ. ವಿಶ್ವಕಪ್​ ಫುಟ್ಬಾಲ್ ಆರಂಭವಾದಗ ಈ ಟ್ರೋಫಿಗೆ ವಿಕ್ಟರಿ ಎಂದು ಕರೆದ್ರು. 1974ರ ವರೆಗೆ ಈ ಟ್ರೋಫಿಗೆ ಜೂಲ್ಸ್ ರಿಮೆಟ್ ಟ್ರೋಫಿ ಎಂದು ಹೆಸರಿಡಲಾಯಿತು. ಫಿಫಾ ಅಧ್ಯಕ್ಷ ಜೂಲ್ಸ್ ರಿಮೆಟ್ ಅವರ ಹೆಸರಿನಲ್ಲಿಯೇ ಈ ಟ್ರೋಫಿಯನ್ನು ಕರೆಯಲಾಗುತ್ತಿತ್ತು. ಈ ಟ್ರೋಫಿ ಸುಮಾರು 35 ಸೆಂಟಿಮೀಟರ್​​ ಉದ್ದ, 3.8 ಕೆ.ಜಿ ತೂಕವನ್ನು ಹೊಂದಿತ್ತು.
ಬದಲಾದ ಕಾಲಘಟ್ಟದಲ್ಲಿ ಟ್ರೋಫಿಗೆ ಮರು ನಾಮಕರಣ ಮಾಡಲಾಯಿತು. ಅದ್ರಂತೆ ಫಿಫಾ ವಿಶ್ವಕಪ್​ ಟ್ರೋಫಿ ಎಂದು ಕರೆಯಲಾಯಿತು. ಮೊದಲಿದ್ದ ಟ್ರೋಫಿಗೆ ಹೊಸ ಟಚ್​​ ನೀಡಿದ ಫಿಫಾ, ಇಬ್ಬರು ಮನಷ್ಯರ ಕೈಯಲ್ಲಿ ವಿಶ್ವವನ್ನೇ ಹಿಡಿದಂತೆ ಕೆತ್ತನೆ ಮಾಡಲಾಯಿತು. ಈ ಪ್ರಶಸ್ತಿಯಲ್ಲಿ 18 ಕ್ಯಾರೇಟ್​​ ಚಿನ್ನವನ್ನ ಬಳಸಲಾಗುತ್ತಿದೆ. ಟ್ರೋಫಿಯಲ್ಲಿ 75 ಪ್ರತಿಷತದಷ್ಟು ಭಾಗ ಚಿನ್ನವೇ ಆವರಿಸಿದೆ. 36.5 ಸೆಂಟಿಮೀಟರ್​ ಉದ್ದ ಹೊಂದಿರುವ ಪ್ರಶಸ್ತಿಯ ತಳಭಾಗವೇ 13 ಸೆಂಟೀಮಿಟರ್​ ಹೊಂದಿದೆ.
ಚಿನ್ನದ ಲೇಪನದ ಟ್ರೋಫಿಯನ್ನು ಹಿಡಿದು ಮುದ್ದಾಡಲು ಎಲ್ಲ ಫುಟ್ಬಾಲ್​ ತಂಡಗಳು ಸಹ ಭರ್ಜರಿ ತಯಾರಿ ನಡೆಸಿವೆ. ಈ ಬಾರಿ ಈ ಸುರಸುಂದರಿಯನ್ನು ಯಾರು ಹೊತ್ತು ಹೋಗುತ್ತಾರೋ ಎಂಬುದೇ ಅಭಿಮಾನಿಗಳ ತಲೆ ಕೆಡಿಸಿದೆ. 

Related image
——————————————————————————————————————-
ಫಿಫಾ ವಿಶ್ವಕಪ್​ ಫುಟ್ಬಾಲ್​ನಲ್ಲಿ ಹಣದ ಹೊಳೆ ಹರಿಯುತ್ತದೆ. ಈ ಪ್ರತೀಷ್ಠಿತ ಕ್ರೀಡೆಯನ್ನು ಆಯೋಜಿಸುವದರಿಂದ ದೇಶದ ಆರ್ಥಿಕತೆಯಲ್ಲಿ ಬದಲಾವಣೆ ಬರುತ್ತದೆ. ನಾಲ್ಕು ವಸಂತಕ್ಕೆ ಒಮ್ಮೆ ನಡೆಯುವ ಕ್ರೀಡಾ ಹಬ್ಬದಲ್ಲಿ ಕೋಟಿಯಷ್ಟು ಹಣ, ನೀರಿನಂತೆ ಹರಿಯುತ್ತದೆ. ಒಂದೊಮ್ಮೆ ನೀವು ಈ ಬಾರಿ ವಿಶ್ವಕಪ್​ ಖರ್ಚು ಮಾಡುವ ಹಣವನ್ನು ಕೇಳಿದ್ರೆ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳೋದಂತು ಗ್ಯಾರಂಟಿ.
ರಷ್ಯಾ ಹಾಗೂ ಅಂತಾರಾಷ್ಟ್ರೀಯ ಫುಟ್ಬಾಲ್​ ಸಂಸ್ಥೆಗಳು ಈ ಬಾರಿಯ ವಿಶ್ವಕಪ್​​ ಯಶಸ್ಸಿಗಾಗಿ ಹಗಲಿರುಳು ದುಡಿಯುತ್ತಿವೆ. ಇದಕ್ಕಾಗಿಯೇ ಉತ್ತಮ ವ್ಯವಸ್ಥೆಗಳನ್ನು ಮಾಡಿಕೊಂಡಿವೆ. ಈ ಬಾರಿ ಪ್ರತಿಷ್ಠಿತ ಟೂರ್ನಿಗೆ ಸುಮಾರು 2685 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಈ ಅಂಕಿ ಅಂಶಗಳು ವಿಶ್ವ ಕ್ರೀಡಾ ಭೂಪಟದಲ್ಲಿ ಫುಟ್ಬಾಲ್​​ಗೆ ಇರುವ ವರ್ಚಸ್ಸು ಎತ್ತಿ ತೋರಿಸುತ್ತದೆ. ಈ ಟೂರ್ನಿಗೆ ಅರ್ಹತೆ ಪಡೆದ ತಂಡ ಸಹ ಕೋಟಿ ಕೋಟಿ ಹಣವನ್ನು ಪಡೆದು ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸುತ್ತದೆ. 

Image result for Fifa world cup 2018
ಈ ಬಾರಿ ಲೀಗ್​​ನಲ್ಲಿ ಹೊರ ನಡೆಯುವ ತಂಡ 8 ಮಿಲಿಯನ್​ ಡಾಲರ್​​ ಲಭಿಸಲಿದೆ. ಫ್ರಿ ಕ್ವಾರ್ಟರ್​ ಫೈನಲ್​ ಪ್ರವೇಶಿಸುವ ತಂಡ 12 ಮಿಲಿಯನ್​ ಡಾಲರ್​ ಪಡೆದು ಕೊಳ್ಳುತ್ತದೆ. ಇನ್ನು ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳು ತಂಡ 22 ಮಿಲಿಯನ್​, ಮೂರನೇ ಸ್ಥಾನ ಪಡೆಯುವ ತಂಡ 24 ಮಿಲಿಯನ್​ ಡಾಲರ್​ ಪಡೆದು ಬೀಗುತ್ತದೆ.
ಇನ್ನು ಚಾಂಪಿಯನ್​ ಪಟ್ಟಕ್ಕಾಗಿ ಕಾದಾಟ ನಡೆಸಿ ವಿಫಲವಾಗುವ ತಂಡ, ಟ್ರೋಫಿಯ ಕನಸಿಗೆ ಪೆಟ್ಟು ಬೀಳುತ್ತದೆ ಬಿಟ್ಟರೆ, ಹಣದ ಮೂಟೆಯನ್ನು ಹೊತ್ತು ತಮ್ಮ ದೇಶಕ್ಕೆ ಹಾರಲಿದೆ. ಎರಡನೇ ಸ್ಥಾನ ಪಡೆದ ತಂಡ ಭರ್ತಿ 188 ಕೋಟಿ ರೂಪಾಯಿಯನ್ನು ಜೇಬಿಗೆ ಇಳಿಸಿಕೊಳ್ಳಲಿದೆ.
ನಾಲ್ಕು ವರ್ಷಗಳ ಕಾಲ ತನ್ನ ಹೆಸರಿನ ಹಿಂದೆ ಫಿಫಾ ವಿಶ್ವ ಚಾಂಪಿಯನ್​ ಎಂದು ಕರೆಸಿಕೊಳ್ಳುವ ತಂಡದ ಬ್ಯಾಂಕ್​ ಬ್ಯಾಲೆನ್ಸ್​ ಭರ್ತಿ ಆಗುತ್ತದೆ. ಪ್ರಸಸ್ತಿಯೊಂದಿಗೆ ವಿಜೇತ ತಂಡ ಬರೋಬರಿ 255 ಕೋಟಿ ರೂಪಾಯಿ ಪಡೆಯಲಿದೆ.

Leave a Reply

Your email address will not be published.