ದಾವಣಗೆರೆ : ಮಹಿಳೆ ಮೇಲೆ ಕರಡಿ ದಾಳಿ : ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

ದಾವಣಗೆರೆ : ಜಮೀನಿಗೆ ತೆರಳುತ್ತಿದ್ದ ಮಹಿಳೆ ಮೇಲೆ ಕರಡಿಯೊಂದು ದಾಳಿ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಹುಚ್ಚಂಗಿಪುರದಲ್ಲಿ ನಡೆದಿದೆ. 55 ವರ್ಷ ವಯಸ್ಸಿನ ಶಾಂತಮ್ಮ ಎಂಬುವವರು ಕರಡಿ ದಾಳಿಗೆ ಒಳಗಾಗಿದ್ದಾರೆ. ಬೆಳಗ್ಗೆ 7-30 ರ ಸುಮಾರಿಗೆ ಜಮೀನಿಗೆ ಹೋಗುತ್ತಿರುವಾಗ ಘಟನೆ ನಡೆದಿದೆ.

ಕರಡಿ ದಾಳಿಗೆ ಒಳಗಾದ ಮಹಿಳೆಯನ್ನು ಸಾರ್ವಜನಿಕರು ರಕ್ಷಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಅರಣ್ಯ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com