ವಿಜಯಪುರ : SIT ತಂಡದಿಂದ ಗೌರಿ ಲಂಕೇಶ್ ಇನ್ನೊಬ್ಬ ಹಂತಕನ ಬಂಧನ

ವಿಜಯಪುರ : ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಭಂಧ ಪಟ್ಟಂತೆ ಇನ್ನೋರ್ವ ಆರೋಪಿಯನ್ನು ಎಸ್.ಐ.ಟಿ ತಂಡ ಬಂಧಿಸಿದೆ. ಜೂನ್ 10ರಂದು ವಿಜಯಪುರ ಜಿಲ್ಲೆಯ ಸಿಂದಗಿ ಯಲ್ಲಿ ವಶಕ್ಕೆ ಪಡೆದಿರುವ ಸಾಧ್ಯತೆಯಿದೆ. ಪರಶುರಾಮ ವಾಗ್ಮೋರೆ (25) ಬಂದಿತ ಆರೋಪಿಯಾಗಿದ್ದಾನೆ. ಬೆಂಗಳೂರಿನಲ್ಲಿ ಎಸ್.ಐ.ಟಿ ತಂಡದಿಂದ ವಿಚಾರಣೆ ನಡೆಸಲಾಗುತ್ತಿದೆ. ಈತನೊಂದಿಗೆ ಇನ್ನೋರ್ವ ಆರೋಪಿ ಅನೀಲ ಅಗಸರ ನನ್ನು ವಶಕ್ಕೆ ಪಡೆದಿರುವ ಅನುಮಾನವಿದೆ.

2012 ರಲ್ಲಿ ಪಾಕಿಸ್ತಾನ ಧ್ವಜ ಹಾರಿಸುವಲ್ಲಿ ಪ್ರಮುಖ ಮಾತ್ರ ವಹಿಸಿದ್ದ ಸಿಂದಗಿಯ ಪರಶುರಾಮ ವಾಗ್ಮೋರೆ ಎಸ್ ಐಟಿ ವಶಕ್ಕೆ ಪಡೆದಿದ್ದಾರೆ. ಗೌರಿ ಲಂಕೇಶ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾಗಿದ್ದು, ಆತಂಕಗೊಂಡು ಪರಶುರಾಮನ ಕುಟುಂಬಸ್ಥರು ಮನೆ ತೊರೆದಿದ್ದಾರೆ. ಸಿಂದಗಿಯ ವಿದ್ಯಾನಗರದ ಸಂಗಮ ಲಾಡ್ಜ್ ಹಿಂದಿರುವ ಪರಶುರಾಮನ ಮನೆಗೆ ಬೀಗ ಹಾಕಲಾಗಿದೆ.

ಈತನೊಂದಿಗೆ ಇನ್ನೊಬ್ಬ ಆರೋಪಿ ಅನೀಲ ಅಗಸರ ನನ್ನು ವಶಕ್ಕೆ ಪಡೆದಿರುವ ಶಂಕೆ. 2012 ರಲ್ಲಿ ಸಿಂದಗಿ ತಹಸೀಲ್ದಾರ್ ಕಚೇರಿ ಮುಂದೆ ಪಾಕಿಸ್ಥಾನ ಧ್ವಜ ಹಾರಿಸಿ ಬಸ್ ಗೆ ಕಲ್ಲು ತೂರಿದ ಆರೋಪಿಗಳ ಪೈಕಿ ಪರಶುರಾಮ ಒಬ್ಬ. ನಂತರ ಸಿಂದಗಿಯಲ್ಲಿ ಕಂಪ್ಯೂಟರ್ ಅಂಗಡಿ ಇಟ್ಟುಕೊಂಡಿದ್ದ.

One thought on “ವಿಜಯಪುರ : SIT ತಂಡದಿಂದ ಗೌರಿ ಲಂಕೇಶ್ ಇನ್ನೊಬ್ಬ ಹಂತಕನ ಬಂಧನ

Leave a Reply

Your email address will not be published.

Social Media Auto Publish Powered By : XYZScripts.com