ಜನರೇ ಟೋಪಿ ಹಾಕಿದ್ರು ನಿನ್ಯಾಕೇ ಹಾಕ್ತಿಯಪ್ಪ..? : ತಮ್ಮನ್ನು ತಾವೇ ವ್ಯಂಗ್ಯ ಮಾಡಿಕೊಂಡ ಸಿದ್ದು

ಮೈಸೂರು : ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ರಾಂತಿ ಪಡೆಯಲು  ಮೈಸೂರಿನಲ್ಲಿರುವ ತಮ್ಮ ನಿವಾಸಕ್ಕೆ  ಹೋಗಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ಸನ್ಮಾನ ಮಾಡಲು ಬಂದಾಗ  ‘ಜನರೇ ಟೋಪಿ ಹಾಕಿದ್ರು ನಿನ್ಯಾಕೇ ಹಾಕ್ತಿಯಪ್ಪ’ ಎಂದು ಸಿದ್ದರಾಮಯ್ಯ ತಮ್ಮನ್ನು ತಾವೇ  ವ್ಯಂಗ್ಯ ಮಾಡಿಕೊಂಡಿದ್ದಾರೆ.

ತಮ್ಮ ಮೈಸೂರಿನ ನಿವಾಸದಲ್ಲಿ  ವಿಶ್ರಾಂತಿ  ಪಡೆಯುತ್ತಿದ್ದ ಸಿದ್ದರಾಮಯ್ಯನಿಗೆ  ಚಂದನ ಎಂಬ ಅಭಿಮಾನಿ  ಸನ್ಮಾನ ಮಾಡಲು ಆಗಮಿಸಿದ್ದನು. ನಿಮಗೆ  ಸನ್ಮಾನ  ಮಾಡಬಹುದ   ಎಂದು ಕೇಳಿ ಶಾಲು ಹಾರ ಹಾಕಿ ಮೈಸೂರು ಪೇಟ ತೋಡಿಸಲು ಹೋದಾಗ  ‘ಜನರೇ ಟೋಪಿ ಹಾಕಿದ್ರು ಇದೇಲ್ಲ ಯಾಕಪ್ಪ ಎಂದು ತಮ್ಮ ಸೋಲಿನ ಕುರಿತು ತಾವೇ ವ್ಯಂಗ್ಯ ಮಾಡಿಕೊಂಡಿದ್ದಾರೆ. ನಂತರ ನಗುತ್ತಲೇ ಮೈಸೂರು ಪೇಟ ತೆಗೆದು ಇಟ್ಟು ಆಪ್ತರೊಂದಿಗೆ  ಸಿದ್ದರಾಮಯ್ಯ ಮಾತನಾಡಲು ಶುರು ಮಾಡಿದ್ದರು.

ಚುನಾವಣೆ ಫಲಿತಾಂಶ ನಂತರ ಮೈಸೂರಿಗೆ ಹೋಗಿರುವ ಮಾಜಿ ಸಿಎಂ ಸಿದ್ದರಾಮಯ್ಯರನ್ನು  ಭೇಟಿ ಮಾಡಲು ಸಚಿವ ಪುಟ್ಟರಂಗ ಶೆಟ್ಟಿ ಆಗಮಿಸಿದ್ದರು. ಪುಟ್ಟರಂಗನವರ ಜೊತೆ ತಮ್ಮದೆ ದಾಟಿಯಲ್ಲಿ  ಆತ್ಮೀಯವಾಗಿ ಮಾತನಾಡಿದ  ಸಿದ್ದರಾಮಯ್ಯ, ಅಧಿಕಾರ ಬಂದ‌ ಮೇಲೆ ನಾವು ಕಾಣುವುದಿಲ್ಲ ಎಂದ ವ್ಯಂಗ್ಯ ಮಾಡಿದ್ದರು ಇದಕ್ಕೆ ಉತ್ತರ ನೀಡಲು ಆಗದೇ ಸಚಿವ  ಪುಟ್ಟರಂಗಶೆಟ್ಟಿ ಮೌನಕ್ಕೆ ಶರಣಾದರು..

ಮಾಜಿ ಸಿಎಂ ಆದ ನಂತರ ಸಿದ್ದು ಮನೆಯ ಕಡೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮುಖ ಮಾಡುತ್ತಿಲ್ಲ. ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಮನೆ ಇದೀಗ ಬಿಕೋ ಎನ್ನುತ್ತಿದೆ. ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯರವರ ಮನೆಯ ಮುಂದೆ ಕಾದು ಜನರು ಕಾದುಕುಳಿತುಕೊಳ್ಳುತ್ತಿದ್ದ ಆದರೆ  ಇದೀಗ ಬೆರಳೆಣಿಕೆಯಷ್ಟೇ ಜನರು   ಜನರನ್ನು ಮಾತ್ರ ಕಾಣಬಹುದು.

ಇನ್ನ ಇಂದು ಸಂಜೆ 6 ಗಂಟೆಗೆ ಬನ್ನಿಮಂಟಪದ ಬಳಿ ಇರುವ ಮಿಲನ್ ಹಾಲ್ ನಲ್ಲಿ ನಡೆಯಲಿರುವ ಇಫ್ತಿಹಾರ್ ಕೂಟದಲ್ಲಿ ಭಾಗವಹಿಸಿ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ವಾಪಸಾಗುವರು.

 

 

 

Leave a Reply

Your email address will not be published.

Social Media Auto Publish Powered By : XYZScripts.com