ನಾನು ಮತ್ತು ಯತೀಂದ್ರ ವರುಣ ಜನತೆಯ ಋಣ ತೀರುಸುವ ಕೆಲಸ ಮಾಡುತ್ತೇವೆ : ಸಿದ್ದರಾಮಯ್ಯ

ಮೈಸೂರು : ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡದ್ದಾರೆ. ‘ ವರುಣ ಜನತೆ ಯ ಎಲ್ಲಾ ಮತದಾರರಿಗೆ ಹೃದಯ ಪೂರ್ವಕವಾಗಿ ಕೃತಘ್ನತೆಗಳನ್ನು ಸಲ್ಲಿಸುತ್ತೇನೆ. ಬಹಳ ದೊಡ್ಡ ಮಟ್ಟದ ಮತ ನೀಡುವ ಮೂಲಕ ಗೆಲ್ಲಿಸಿದ್ದೀರಿ. ನನಗೆ ವರುಣದಲ್ಲಿ ಮುವತ್ತು ಸಾವಿರ ಮತಗಳ ತೆಗೆದುಕೊಂಡಿದ್ದೆ , ಯತೀಂದ್ರ ರವರಿಗೆ ಐವತ್ತೇಂಟು ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡಿ ಗೆಲ್ಲಿಸಿದ್ದೀರಿ. ನಾನು ವರುಣ ಜನತೆಯನ್ನು ಎಂದಿಗೂ ಮರೆಯುವಂತಿಲ್ಲ. ನಾನು ಮತ್ತು ಯತೀಂದ್ರ ರವರು ವರುಣ ಜನತೆ ಋಣ ತೀರಿಸುವ ಕೆಲಸ ಮಾಡುತ್ತೇವೆ

ಕರ್ನಾಟಕ ದಲ್ಲಿ ನಾವು ನಿರೀಕ್ಷೆ‌ಇಟ್ಟಷ್ಟು ಸ್ಥಾನಗಳು ಸಿಗಲಿಲ್ಲ. ನಮಗೆ ನಿರೀಕ್ಷೆ ಇತ್ತು ಯಾಕೆಂದರೆ ನಾವು ಜನತೆಗೆ ಕೊಟ್ಟಂತಹ ಭರವಸೆ ಗಳನ್ನು ಹೀಡೆರಿಸಿದ್ದೆವು , ಜನಪರ ಕೆಲಸಗಳನ್ನು ಮಾಡಿದ್ದೆವು, ಯಾವ ಸರಕಾರವು ಮಾಡದ ಕೆಲಸಗಳನ್ನು ನಾವು ಮಾಡಿದ್ದೆವು , ಆದರೆ ನಮ್ಮ ನಿರೀಕ್ಷೆ ಹುಸಿಯಾಯಿತು. ನಾವು ಕರ್ನಾಟಕ ಹಸಿವು ಮುಕ್ತ ರಾಜ್ಯ ವನ್ನಾಗಿ ಮಾಡಲು ಪಣ ತೊಟ್ಟು ಅನ್ನ ಭಾಗ್ಯ ನೀಡಿದ್ದೇವೆ. ಬಿಜೆಪಿ ಏನೆ ಹೇಳಬಹುದು ಆದರೆ ಅವರ ಕೈಯಲ್ಲಿ ಅನ್ನಭಾಗ್ಯ ಕೊಡೊಕೆ ಆಯಿತಾ..

ನಾನು ಚಿಕ್ಕವನಾಗಿದ್ದಾಗ ಅನ್ನ ಕ್ಕೆ ಎಷ್ಟು ಕಷ್ಟ ಇತ್ತು ಎನ್ನುವುದನ್ನು ಕಣ್ಣಾರೆ ನೋಡಿದ್ದೇನೆ , ಅದಕ್ಕಾಗಿ ನಾನು ಮುಖ್ಯಮಂತ್ರಿ ಯಾಗಿ‌ ಅಧಿಕಾರ ಸ್ವೀಕರಿಸಿದಾಗಲೆ ತೀರ್ಮಾನ ಕ್ಕೆ ಬಂದೆ , ಕರ್ನಾಟಕದಲ್ಲಿ ಯಾರು ಹಸಿದು ಮಲಗಬಾರದು ಎಂದು ಅನ್ನಭಾಗ್ಯ ನೀಡಿದೆ , ಒಂದು ಕೋಟಿ ಎರಡು ಲಕ್ಷ ಮಕ್ಕಳಿಗೆ ಹಾಲು ಮೊಟ್ಟೆ , ಸೈಕಲ್ ,‌ಬಾಲಕಿಯರಿಗೆ ಲ್ಯಾಪ್ ಟಾಪ್ , ಇಂದಿರಾ ಕ್ಯಾಂಟೀನ್ ,ರೈತರ ಸಾಲ ಮನ್ನ , ಹೀಗೆ ಹಲವಾರು ಜನಪರ ಕೆಲಸಗಳನ್ನು ಮಾಡಿದ್ದೆವು , ಇದೆಲ್ಲವನ್ನ ಓಟಿಗಾಗಿ ಅಲ್ಲ ಮಾಡಿದ್ದು ಕೇವಲ ಜನರ ಹಿತದೃಷ್ಟಿಯಿಂದ ಮಾಡಿದ್ದು.

ನರೇಂದ್ರ ಮೋದಿ ಯವರು ಯಾವಗಲೂ ಬಾಯಿ ಹೌರ್ ಬೆಯೊನೋ ಅಂತ ಕೇವಲ ಭಾಷಣ ಬಿಗಿತಾರೆ, ಬಿಜೆಪಿ ನಡಿಗೆ ದಲಿತರ ಮನೆ ಕಡೆಗೆ ಅಂತ ಯಡಿಯೂರಪ್ಪ , ಶೋಭಕರಂದ್ಲಾಜೆ ಯವರು ಹೋಟೆಲ್ ನಿಂದ ತಿಂಡಿ ತರಿಸ್ಕೊಂಡು ತಿಂತರಲ್ಲ ಹಂಗಲ್ಲ ಎಂದು ವ್ಯಂಗ್ಯ ಮಾಡಿದ ಸಿದ್ದರಾಮಯ್ಯ, ಸಬ್ ಕಾ ಸಾತ್ ಸಬ್ ಕಾ ವಿಕಾಸ್ , ಯತ್ನಾಳ್ ಗಡ್ಡ ಬಿಟ್ಟಿರೊರು ಯಾರು ನಮ್ಮ ಬಳಿ ಬರಬಾರದು ಅಂತ ಹೇಳಿದ್ದ ಅಂಗಾದ್ರೆ ಸಬ್ ಕಾ ಸಾತ್ ಸಬ್ ಕಾ ವಿಕಾಸ್, ಮೋದಿ ಮಾತ್ತೆತ್ತಿದ್ರೆ ಮಂನ್ಬಕೀ ಬಾತ್ ಅಂತಾರೆ ,,

ನಾವು ಮಾನವಿಯತೆಯಲ್ಲಿ ನಂಬಿಕೆ ಇಟ್ಟು ಕೊಂಡಂತವರು, ನಾವೇನು ಇಂತದ್ದೆ ಜಾತಿಯಲ್ಲಿ ಹುಟ್ಟಬೇಕು ಅಂತ ಅನ್ಕೊಂಡಿರ್ತಿವಾ..? ಹಂಗೇನಾದ್ರು ಅರ್ಜಿ ಹಾಕೊ ಅವಾಕಾಶ ಇದ್ದಿದ್ರೆ ಇಂತಾ ಜಾತಿಲೆ ಹುಟ್ಟ ಬೇಕು ಅಂತ ಅರ್ಜಿ ಹಾಕಬಹುದಿತ್ತು, ಸೋಲು ಗೆಲವು ಪ್ರಜಾಪ್ರಭುತ್ವ ದಲ್ಲಿರುತ್ತದೆ, ನಾನು ಸೋಲಿಗೆ ಯಾವತ್ತು ಎದರಲ್ಲ, ಆದರೆ ನನಗೆ ಜನ ಯಾಕೆ ಇಷ್ಟೆಲ್ಲ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರು ಜನ ಯಾಕೆ ಅರ್ಥ ಮಾಡಿಕೊಳ್ಳಲಿಲ್ಲ ಎಂಬ ಯಕ್ಷ ಪ್ರಶ್ನೆ ಕಾಡುತ್ತಿದೆ , ಆದರೆ ನನಗೆ ತೃಪ್ತಿ ಇದೆ ಜನಪರ ಕೆಲಸ ಮಾಡಿದ್ದೇನೆ ,

ಜನರ ತೀರ್ಪನ್ನು ನಾನು ಸ್ವೀಕರಿಸುತ್ತೇನೆ, ರಾಜಕೀಯದಲ್ಲಿ ಅಂಬೇಡ್ಕರ್ , ಇಂದಿರಾ ಗಾಂಧಿ ಯವರನ್ನೆ ಜನ ಸೋಲಿಸಿದ್ದರು, ನಾನು ನೋಡಿದ್ದೇನೆ ಒಳ್ಳೆಯವರಿಗೆ ಕಷ್ಟ ಬರೊದು , ಅದಕ್ಕೆ ಮತದಾರರ ತೀರ್ಪಗೆ ತಲೆ ಬಾಗುತ್ತೇನೆ , ಈ ರಾಜ್ಯದ ಜನ ನಮ್ಮ ಕುಟುಂಬವಿದ್ದಂತೆ , ಅದರಲ್ಲೂ ವರುಣದಲ್ಲಿ ಯತೀಂದ್ರ ಸಿದ್ದರಾಮಯ್ಯ ನವರನ್ನ ಗೆಲ್ಲಿಸಿದ್ದೀರಿ ನಿಮ್ಮ ಋಣವನ್ನು ತೀರಿಸುವುದು ನಮ್ಮ ಕರ್ತವ್ಯ ‘ ಎಂದು ಸಿದ್ದರಾಮಯ್ಯ ಹೇಳಿಕೆ .ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com