ಮೈಸೂರು : ಮುಸ್ಲಿಂ ಬಾಂಧವರಿಗಾಗಿ ಇಂದು ಸಂಜೆ ಸಿದ್ದರಾಮಯ್ಯನವರಿಂದ ಇಫ್ತಾರ್ ಕೂಟ

ಮುಸ್ಲಿಂ ಭಾಂದವರಿಗಾಗಿ ಸಿದ್ದರಾಮಯ್ಯರಿಂದ ಮೈಸೂರಿನ ಬನ್ನಿಮಂಟಪದ ಮಿಲನ್ ಫಂಕ್ಷನ್ ಹಾಲ್‌ನಲ್ಲಿ ಇಫ್ತಾರ್ ಕೂಟ ಏರ್ಪಡಿಸಲಾಗಿದೆ. ರಂಜಾನ್ ಹಿನ್ನೆಲೆಯಲ್ಲಿ ಇಂದು ಸಂಜೆ ಇಫ್ತಾರ್ ಕೂಟ ಆಯೋಜಿಸಲಾಗಿದೆ. ಪ್ರತಿ ವರ್ಷವೂ ರಂಜಾನ್ ವೇಳೆ ಮೈಸೂರಿನಲ್ಲಿ ಸಿದ್ದರಾಮಯ್ಯ ಇಫ್ತಾರ್ ಕೂಟ ಆಯೋಜಿಸುತ್ತಾರೆ.

ಕರ್ನಾಟಕ ಸರ್ಕಾರದ ಲೆಟರ್ ಹೆಡ್‌ನಲ್ಲಿ ಆಹ್ವಾನ ಪತ್ರಿಕೆ ಹೊರಡಿಸಿರುವ ಸಿದ್ದು ಇಫ್ತಾರ್ ಕೂಟಕ್ಕೆ ಆಹ್ವಾನಿಸಿದ್ದಾರೆ. ಸಿದ್ದರಾಮಯ್ಯ ಮಾಜಿ ಸಿಎಂ ಆಡಳಿತ ಪಕ್ಷದ ನಾಯಕನ ಹೆಸರಿನಲ್ಲಿ ಆಹ್ವಾನ ಪತ್ರಿಕೆ ಹೊರಡಿಸಲಾಗಿದ್ದು ಆಂಗ್ಲ ಭಾಷೆಯಲ್ಲಿದೆ. ಇಫ್ತಾರ್ ಕೂಟದ ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ತೆರಳಲಿದ್ದಾರೆ.

Leave a Reply

Your email address will not be published.