ಹೈಕಮಾಂಡ್ ಸೂಚನೆ ಮೇರೆಗೆ ದೆಹಲಿಗೆ ಹೋಗಿದ್ದೆ, ಸ್ಥಾನಮಾನ ಕೇಳೋದಕ್ಕಲ್ಲ : ಎಂ.ಬಿ ಪಾಟೀಲ್

ವಿಜಯಪುರ : ವಿಜಯಪುರದಲ್ಲಿ ಶಾಸಕ ಎಂ ಬಿ ಪಾಟೀಲ್ ಹೇಳಿಕೆ ನೀಡಿದ್ದಾರೆ. ದೆಹಲಿಗೆ ತೆರಳಿದ್ದ ವಿಚಾರ ಬಿಚ್ಚಿಟ್ಟ ಎಂ ಬಿ.ಪಾಟೀಲ್ ‘ ಹೈಕಮಾಂಡ್ ದೆಹಲಿಗೆ ಬರುವಂತೆ ಸೂಚಿಸಿದ್ರು ಹಾಗಾಗಿ ಹೋಗಿದ್ದೆ. ನಾನು ಯಾವುದೇ ಸಚಿವ ಸ್ಥಾನಕ್ಕಾಗಿ ಅಥವಾ ಡಿಸಿಎಂ, ಕೆಪಿಸಿಸಿ ಗಾದಿ ಕೇಳಿಲ್ಲ. ನಮ್ಮ ಮನೆತನದ ಇತಿಹಾಸ, 1991ರಿಂದ ನಾನು ಏನು ದುಡಿದಿದ್ದೇನೆ, ನೀರಾವರಿ ಕೆಲಸಗಳನ್ನು ಮಾಡಿದ್ದೇನೆ ಅದನ್ನು ರಾಹುಲಗಾಂಧಿ ಅವರಿಗೆ ಹೇಳಿದ್ದೇನೆ ‘ ಎಂದಿದ್ದಾರೆ.

‘ ನಾನು ಇಷ್ಟೆಲ್ಲ ಸೇವೆ ಸಲ್ಲಿಸಿದ್ರೂ ಯಾಕೆ ಹೀಗಾಯ್ತು ಎಂದು ಅವರಲ್ಲಿ ಮಾತನಾಡಿದ್ದೇನೆ. ಒಬ್ಬರಿಗೆ ಒಂದು ನ್ಯಾಯ ಮತ್ತೊಬ್ಬರಿಗೆ ಒಂದು ನ್ಯಾಯ ಆಗಿದೆ. ನನಗೊಂದು ಮಾನದಂಡ, ಬೇರೆಯವರಿಗೆ ಒಂದು ಮಾನದಂಡ ಮಾಡಲಾಗಿದೆ. ಐದು ವರ್ಷ ಸಚಿವನಾಗಿದ್ದೇನೆ ಎಂದು ನನಗೆ ಕೈ ಬಿಡಲಾಗಿದೆ. ಹಾಗಿದ್ರೆ ಈ ಪಾಲಿಸಿ ಆರ್ ವಿ ದೇಶಪಾಂಡೆ, ಕೆ ಜೆ ಜಾರ್ಜ್, ಯು ಟಿ ಖಾದರ್ ಸೇರಿದಂತೆ ಇತರರಿಗೂ ಅಪ್ಲೈ ಆಗುತ್ತದೆ ‘ ಎಂದಿದ್ದಾರೆ.

ಕಳೆದ ಬಾರಿ ಯಾರು ಸಚಿವರಾಗಿದ್ದಾರೋ ಅವರಿಗೆ ಬೇಡ ಎಂದು ಎಲ್ಲರಿಗೂ ಬಿಡಬೇಕಿತ್ತು. ನಾನು ಯಾರಿಗೂ ಸಚಿವ ಸ್ಥಾನ ಕೊಡಬೇಡ ಎಂದು ಹೇಳಿಲ್ಲ, ನನಗೆ ಏನು ಬೇಕಿತ್ತು ಅದನ್ನು ಹೇಳಿದ್ದೇನೆ. ಇದನ್ನು ಮಾಡಿದವರ ವಿರುದ್ದ ರಾಹುಲ್ ಗಾಂಧಿ ಅವರಿಗೆ ಹೇಳಿದ್ದೇನೆ. ನಾನು ಪಕ್ಷದಲ್ಲಿ ಕೆಲವು ಆಗಿರುವ ತಪ್ಪುಗಳು ಯಾರಿಗೂ ಆಗಬಾರದು ಎಂದು ರಾಹುಲ್ ಗಾಂಧಿ ಅವರಿಗೆ ಹೇಳಿದ್ದೇನೆ. ರಾಹುಲ್ ಗಾಂಧಿ ಅವರೊಂದಿಗೆ ಒಳ್ಳೆಯ ಮೀಟಿಂಗ್ ಮಾಡಲಾಗಿದೆ. ನಾನು ವಯಕ್ತಿಕವಾಗಿ ನನಗೆ ಸ್ಥಾನಮಾನ ಕೇಳಲು ಹೋಗಿಲ್ಲ. ನಾನು ನಂಬಿದಲ್ಲೆ ನನಗೆ ಅನ್ಯಾಯವಾಗಿದೆ. ಅದ್ರೆ ಇನ್ಮುಂದೆ ನಾನು ನನ್ನ ಹೆಂಡತಿ ಮಕ್ಕಳು ಸೇರಿದಂತೆ ಯಾರನ್ನೂ ನಂಬಲ್ಲ ‘ ಎಂದು ಎಂ.ಬಿ ಪಾಟೀಲ್ ಎಂದು ಹೇಳಿದ್ದಾರೆ.

‘ ಅತ್ತೆ ಸತ್ರೆ ಅಮವಾಸೆ ನಿಲ್ಲೋದಿಲ್ಲವಂತೆ ಹಾಗೇ ನಾನು ಇಲ್ಲದಿದ್ರೆ ನೀರಾವರಿ ಕಾಮಗಾರಿ ನಿಲ್ಲೊದಿಲ್ಲ. ಈಗ ಇರುವ ಸಚಿವರು ನೀರಾವರಿ ಕಾಮಗಾರಿಗಳನ್ನು ಮಾಡುತ್ತಾರೆ ‘ ಎಂದು ಹೇಳಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಪ್ರತಿಕ್ರಿಯೆ ನೀಡಿದ ಅವರು ‘ ಅದನ್ನು ಎಸ್ ಎಮ್ ಜಾಮದಾರ ಅವರಿಗೆ ಬಿಟ್ಟಿದ್ದೇನೆ. ಅದು ಜಾಗತಿಕ ಧರ್ಮ ಆಗಬೇಕು ಎಂಬುದು ನನ್ನ ಆಸೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com