ಮಾಸ್ತಿಗುಡಿ ಖಳನಾಯಕರ ಸಾವು ಪ್ರಕರಣ : ಜೂನ್​ 27ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು : ಮಾಸ್ತಿಗುಡಿ  ಚಿತ್ರೀಕರಣದ ವೇಳೆ ಇಬ್ಬರು ಖ್ಯಾತ ಖಳನಾಯಕರ ಮೃತಪಟ್ಟ ಪ್ರಕರಣ ಸಂಬಂಧ ಪಟ್ಟಂತೆ ಇಂದು 6 ಮಂದಿ  ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಮಾಸ್ತುಗುಡಿ ಚಿತ್ರದ ನಿರ್ಮಾಪಕ ಸುಂದರ್ ಪಿ.ಗೌಡ, ನಿರ್ದೇಶಕ ನಾಗಶೇಖರ್, ಸಾಹಸ ನಿರ್ದೇಶಕ ರವಿವರ್ಮಾ, ಯುನಿಟ್ ಮ್ಯಾನೇಜರ್ ಭರತ್, ಸಹನಿರ್ದೇಶಕ ಸಿದ್ಧಾರ್ಥ ಹಾಗೂ ಮತ್ತೊಬ್ಬ ಆರೋಪಿ ಪ್ರಕಾಶ್ ಬಿರಾದಾರ್ ಇವರೆಲ್ಲರು ರಾಮನಗರದ  3ನೇ ಹೆಚ್ಚುವರಿ  ಸತ್ರ  ನ್ಯಾಯಲಯಕ್ಕೆ ಹಾಜರಾಗಿದ್ರು.

ಈ ಪ್ರಕರಣಕ್ಕೆ  ಸಂಬಂಧ ಪಟ್ಟ ಆರು  ಆರೋಪಿಗಳ  ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಈ ದೋಷಾರೋಪ ಪಟ್ಟಿಯನ್ನು  ರದ್ದುಗೊಳಿಸಿದ್ದ  ಹೈಕೋರ್ಟ್,  ಪ್ರಕರಣವನ್ನು  ಹೊಸದಾಗಿ ವಿಚಾರಣೆ ನಡೆಸುವಂತೆ  ರಾಮನಗರ ಸೇಷನ್ಸ್  ನ್ಯಾಯಲಯಕ್ಕೆ ಮರಳಿಸಿತ್ತು, ಇದೀಗ   ರಾಮನಗರ ಕೋರ್ಟ್​ನ  ನ್ಯಾಯಾಧೀಶರಾದ  ಗೋಪಾಲಕೃಷ್ಣ ರೈ ಅವರು ವಿಚಾರಣೆ ನಡೆಸಿ ವಿಚಾರಣೆಯನ್ನು ಇದೇ ತಿಂಗಳ 27ಕ್ಕೆ ಮುಂದೂಡಿದ್ದರು.    ​

 

Leave a Reply

Your email address will not be published.