HDK ಸಿಎಂ ಆದ ಹಿನ್ನೆಲೆ : ಬಾಡೂಟ ಹಾಕಿಸಿ ಭೂತಪ್ಪ ಸ್ವಾಮಿಗೆ ಹರಕೆ ತೀರಿಸಿದ ಗ್ರಾಮಸ್ಥರು

ಚಿತ್ರದುರ್ಗ : HDK ಸಿಎಂ ಆದರೆ ಬಾಡೂಟ ಹಾಕಿಸುವ ಹರಕೆ ಹೊತ್ತಿದ್ದ ರೈತ ವರ್ಗ, ಎಚ್ ಡಿ ಕುಮಾರಸ್ವಾಮಿ ಸಿಎಂ ಆದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಬಾಡೂಟ ಹಾಕಿಸಿ ಹರಕೆ ತೀರಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹೊಸಕೆರೆ ಪಾಳ್ಯದ ರೈತರು ಮತ್ತು ಗ್ರಾಮಸ್ಥರು, ಹೊಸಕೆರೆ ಗ್ರಾಮದ ಭೂತಪ್ಪ ಸ್ವಾಮಿಗೆ ಹರಿಕೆ ತೀರಿಸದ್ದಾರೆ.

ಕಳೆದ ಶನಿವಾರ ನಡೆದ ಘಟನೆ ಇದಾಗಿದ್ದು, 3 ಕ್ವಿಂಟಾಲ್ ಕೋಳಿ ಮಾಂಸವನ್ನು ಗ್ರಾಮಸ್ಥರು ಸಿದ್ದಪಡಿಸಿದ್ದರು. ಹೊಸಕೆರೆ ಸುತ್ತಮುತ್ತಲಿನ ಜನರು ಬಾಡೂಟ ಸವಿದಿದ್ದಾರೆ. ಭೂತಪ್ಪಸ್ವಾಮಿಗೆ ಹರಕೆ ತೀರಿಸಿ ರೈತರ ಸಂಕಷ್ಟ ದೂರವಾಗಲಿ ಉತ್ತಮ ಮಳೆ ಬೆಳೆಯಾಗಲಿ ಸರ್ವರು ಸಂತೋಷ ವಾಗಿರಲೆಂದು ಗ್ರಾಮಸ್ಥರು ಬೇಡಿಕೊಂಡಿದ್ದಾರೆ.

‘ಐತಿಹಾಸಿಕ ಧರ್ಮಪುರ ಕೆರೆ ಪೂರಕ ನಾಲೆ ನಿರ್ಮಾಣ ಮಾಡುವ ಶಕ್ತಿ ಸಿಎಂ HDK ಗೆ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಲಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Leave a Reply

Your email address will not be published.