Social media Tragedy : ಫೇಸ್ಬುಕ್ ನಿಂದಾಗಿ ಗಂಡ-ಹೆಂಡತಿ ಕಿತ್ತಾಟ : ಆತ್ಮಹತ್ಯೆಯಲ್ಲಿ ಅಂತ್ಯ

ಅತಿಯಾದ ಫೇಸ್ಬುಕ್ ಬಳಕೆಯ ಕುರಿತಂತೆ ಗಂಡ-ಹೆಂಡತಿ ನಡುವೆ ಶುರುವಾದ ಜಗಳವೊಂದು ದಂಪತಿಗಳ ಆತ್ಮಹತ್ಯೆಯಲ್ಲಿ ಅಂತ್ಯಕಂಡಿರುವ ಘಟನೆ ಬೆಂಗಳೂರಿನಲ್ಲಿ ಸೋಮವಾರ ನಡೆದಿದೆ.  28 ವರ್ಷದ ಅನೂಪ್ ಹಾಗೂ 23 ವರ್ಷ ವಯಸ್ಸಿನ ಪತ್ನಿ ಸೌಮ್ಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅನೂಪ್ ಹಾಗೂ ಸೌಮ್ಯ ಕಳೆದ ಒಂದೂವರೆ ವರ್ಷದಿಂದಲೂ ಬೆಂಗಳೂರಿನ ಬಾಗಲಗುಂಟೆ ರಾಮಯ್ಯ ಲೇಔಟ್ ನಲ್ಲಿರುವ ಮನೆಯೊಂದರಲ್ಲಿ ವಾಸಿಸುತ್ತಿದ್ದರು.

ಪತ್ನಿ ಸೌಮ್ಯ ಅತಿಯಾಗಿ ಫೇಸ್ಬುಕ್ ಬಳಸುವುದರಿಂದ ಪತಿ ಅನೂಪ್ ಬೇಸತ್ತಿದ್ದರು. ಅತಿಯಾಗಿ ಫೇಸ್ಬುಕ್ ಅನ್ನು ಬಳಸಬೇಡ ಎಂದು ಪತ್ನಿ ಸೌಮ್ಯಗೆ ಹಲವು ಬಾರಿ ಅನೂಪ್ ಹೇಳಿದ್ದರು. ಸೋಮವಾರವೂ ಇದೇ ವಿಷಯಕ್ಕಾಗಿ ದಂಪತಿಗಳ ನಡುವೆ ಜಗಳ, ವಾಗ್ವಾದ ನಡೆದಿದೆ. ಬಳಿಕ ಇಬ್ಬರೂ ಬೇರೆ ಬೇರೆ ಕೋಣೆಗಳಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com