10 ಸಾವಿರ ಶಿಕ್ಷಕರ ಹುದ್ದೆಗೆ ಸದ್ಯದಲೇ ಆದೇಶ : ಶಿಕ್ಷಣ ಸಚಿವ ಎನ್​.ಮಹೇಶ್

ಬೆಂಗಳೂರು :  ಗುಣಮಟ್ಟದ ಶಿಕ್ಷಣಕ್ಕೆ ನಾನು ಹೆಚ್ಚು ಓತ್ತು ನೀಡುತ್ತೇನೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಹೇಳಿಕೊಂಡಿದ್ದಾರೆ.ಶಿಕ್ಷಣ ಖಾತೆಗಾಗಿ ನಾನು ಸಿಎಂ ಬಳಿ ಮನವಿ ಮಾಡಿದ್ದೆ. ನನಗೆ ಅದೇ ಖಾತೆ ನೀಡಿದ್ದಾರೆ ಈ ವಿಷಯದಲ್ಲಿ ನನಗೆ ಖುಷಿ ಇದೆ ಎಂದು ಜೊತೆಗಿನ  ಮಹೇಶ್ ಸಂತಸ ವ್ಯಕ್ತಪಡಿಸಿದ್ದಾರೆ.
ಗುಣಮಟ್ಟದ ಶಿಕ್ಷಣಕ್ಕೆ ನನ್ನ ಮೊದಲ ಆದ್ಯತೆ, ಹಲವು ವಿಷಯಗಳಲ್ಲಿ ಬದಲಾವಣೆ ಅಗತ್ಯವಿದೆ. ಇಲಾಖೆಯನ್ನು ಸುಧಾರಿಸಲು ಶ್ರಮಿಸುತ್ತೇನೆ ಹಾಗೂ
 ಹೆಣ್ಣು ಮಕ್ಕಳಿಗೆ ಪದವಿ ಪಡೆಯುವವರೆಗೂ ಉಚಿತ ಶಿಕ್ಷಣ ಸಿಗಬೇಕು ಎಂಬುದು ನನ್ನ ಬಯಕೆಯಾಗಿದೆ,ಸಿಎಂ ಕೂಡ ಇತ್ತೀಚೆಗೆ ಇದನ್ನೇ ಹೇಳಿದ್ದಾರೆ, ಉಚಿತ ಶಿಕ್ಷಣ ನೀಡುವುದರಿಂದ ಡ್ರಾಪ್ ಔಟ್ ಪ್ರಮಾಣ ಕಡಿಮೆಯಾಗುತ್ತದೆ ಎಂದು ಹೇಳಿದ್ದರು.
ಸದ್ಯ ನೀತಿ ಸಂಹಿತೆ ಜಾರಿಯಲ್ಲಿದೆ, ಜೂನ್ 16ರ ನಂತರ 10ಸಾವಿರ ಶಿಕ್ಷಕರ ನೇಮಕಕ್ಕೆ ಆದೇಶ ಹೊರಡಿಸಲಾಗುವುದು. ಸುಮಾರು 22 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿಯಿವೆ ಎಂಬುದು ನನ್ನ ಗಮನಕ್ಕೆ ಬಂದಿದೆ, ಎಷ್ಟು ಸಾಧ್ಯವೋ ಅಷ್ಟು ಬೇಗ ಹುದ್ದೆಗಳನ್ನು ತುಂಬಲು ಪ್ರಯತ್ನಿಸುತ್ತೇವೆ,  ತಾತ್ಕಾಲಿಕವಾಗಿ 15 ಸಾವಿರ ಅತಿಥಿ ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published.