ಆಂಧ್ರ ಪ್ರದೇಶ : ದಲಿತ ವ್ಯಕ್ತಿಯನ್ನು ವೈಷ್ಣವ ಮಂದಿರಕ್ಕೆ ಹೊತ್ತೊಯ್ಯಲಿರುವ ಅರ್ಚಕ

ನೆರೆ ರಾಜ್ಯ ಆಂಧ್ರ ಪ್ರದೇಶದಲ್ಲಿ ದೇವಸ್ಥಾನದ ಪುರೋಹಿತರೊಬ್ಬರು ದಲಿತ ವ್ಯಕ್ತಿಯನ್ನು ತಮ್ಮ ಭುಜಗಳ ಮೇಲೆ ಕೂರಿಸಿಕೊಂಡು ವೈಷ್ಣವ ಮಂದಿರದವರೆಗೆ ಕರೆದುಕೊಂಡು ಹೋಗಲು ಸಿದ್ಧರಾಗಿದ್ದಾರೆ. ಆಂಧ್ರಪ್ರದೇಶದ ಕಡಪ ಜಿಲ್ಲೆಯ ಕಲ್ಯಾಣಪುರಂನ ವಿಜಯ್ ಕುಮಾರ್ ಎಂಬ ಹೆಸರಿನ ಅರ್ಚಕರೊಬ್ಬರು, 70 ವರ್ಷದ ಕುಳ್ಳೈ ಚಿನ್ನ ನರಸಿಂಹಲು ಎಂಬ ದಲಿತ ವ್ಯಕ್ತಿಯನ್ನು ಹೆಗಲ ಮೇಲೆ ವೈಷ್ಣವ ಮಂದಿರದವರೆಗೆ ಹೊತ್ತುಕೊಂಡು ಹೋಗಲಿದ್ದಾರೆ.

Image result for priest carry dalit man

ಜೂನ್ 14ರಂದು ನಡೆಯಲಿರುವ ಮೆರವಣಿಗೆಯಲ್ಲಿ ಗುಂಟೂರಿನ ಮೋಹನ ರಂಗನಾಯಕ ಸ್ವಾಮಿ ಮಂದಿರದವರೆಗೆ ವಿಜಯ್ ಕುಮಾರ್ ಚಿನ್ನ ನರಸಿಂಹಲು ಅವರನ್ನು ಹೊತ್ತೊಯ್ಯಲಿದ್ದಾರೆ.

Image result for priest carry dalit man

ಕೆಲವು ದಿನಗಳ ಹಿಂದೆ ಹೈದರಾಬಾದ್ ನಗರದ ಪುರೋಹಿತರೊಬ್ಬರು ದೇವಸ್ಥಾನದವರೆಗೆ ದಲಿತ ವ್ಯಕ್ತಿಯನ್ನು ಭುಜಗಳ ಮೇಲೆ ಹೊತ್ತೊಯ್ದಿದ್ದರು. ಈ ಘಟನೆಯಿಂದ ಪ್ರೇರಣೆ ಪಡೆದಿರುವ ವಿಜಯ ಕುಮಾರ್, ತಾವು ಸಹ ದಲಿತ ಭಕ್ತರೊಬ್ಬರನ್ನು ಮಂದಿರವರೆಗೆ ಹೆಗಲ ಮೇಲೆ ಕುಳ್ಳಿರಿಸಿ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಸಮಾಜದಲ್ಲಿ ಸಮಾನತೆಯನ್ನು ಸಾರುವ ಉದ್ದೇಶಕ್ಕಾಗಿ ಇದನ್ನು ಮಾಡುತ್ತಿರುವುದಾಗಿ ವಿಜಯ್ ಕುಮಾರ್ ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com