ಇಂದೋರ್ : ವಿವಾದಾತ್ಮಕ ದೇವಮಾನವ ಭಯ್ಯೂಜಿ ಮಹಾರಾಜ್ ಆತ್ಮಹತ್ಯೆ

ಮಧ್ಯಪ್ರದೇಶದ ವಿವಾದಾತ್ಮಕ ದೇವಮಾನವ, ಆಧ್ಯಾತ್ಮಿಕ ಧರ್ಮಗುರು ಭಯ್ಯೂಜಿ ಮಹರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಮಧ್ಯಾಹ್ನ 2.40ರ ಸುಮಾರಿಗೆ ಇಂದೋರ್ ನಲ್ಲಿರುವ ನಿವಾಸದಲ್ಲಿ ತಮಗೆ ತಾವೇ ಗುಂಡು ಹಾರಿಸಿಕೊಂಡು ಭಯ್ಯೂಜಿ ಮಹರಾಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

‘ ಆಧ್ಯಾತ್ಮಿಕ ಗುರು ಭಯ್ಯೂಜಿ ಮಹರಾಜ್ ತಮ್ಮ ಮನೆಯಲ್ಲಿಯೇ, ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಅವರ ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣವಿರಬಹುದು ‘ ಎಂದು ಇಂದೋರ್ ಡಿಐಜಿ ಹರಿನಾರಾಯಣಾಚಾರಿ ಮಿಶ್ರಾ ಹೇಳಿದ್ದಾರೆ.

Related image

ಭಯ್ಯೂಜಿ ಮಹರಾಜ್ ಸಾವಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಸಂತಾಪ ವ್ಯಕ್ತಪಡಿಸಿದ್ದಾರೆ. ‘ ಭಯ್ಯೂಜಿ ಮಹರಾಜರಿಗೆ ನಾನು ಶೃದ್ಧಾಂಜಲಿ ಅರ್ಪಿಸುತ್ತೇನೆ. ಸಂಸ್ಕೃತಿ, ಜ್ಞಾನ ಹಾಗೂ ನಿಸ್ವಾರ್ಥ ಸೇವೆಯ ಸಂಗಮವಾಗಿದ್ದ ವ್ಯಕ್ತಿಯನ್ನು ನನ್ನ ದೇಶ ಕಳೆದುಕೊಂಡಿದೆ ‘ ಎಂದು ಶಿವರಾಜ್ ಸಿಂಗ್ ಚೌಹಾನ್ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com