ಕಾರವಾರ : ಟೆಂಪೋ-ಟ್ರಾವೆಲರ್ ಮುಖಾಮುಖಿ ಡಿಕ್ಕಿ : 15 ಪ್ರಯಾಣಿಕರಿಗೆ ಗಾಯ
ಕಾರವಾರ : ಲಾರಿ ಮತ್ತು ಟೆಂಪೋ ಟ್ರಾವೆಲರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ 15 ಪ್ರಯಾಣಿಕರಿಗೆ ಗಾಯವಾಗಿ ರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸುಂಕಸಾಳದಲ್ಲಿ ನಡೆದಿದೆ. ಟೆಂಪೋ ಟ್ರಾವೆಲರ್ಸ್ನಲ್ಲಿದ್ದ 15 ಪ್ರಯಾಣಿಕರು ಗದಗ ದಿಂದ ಪ್ರವಾಸಕ್ಕೆ ಗೋಕರ್ಣಕ್ಕೆ ಬರುತ್ತಿದ್ದರು.
ಇದೇ ವೇಳೆ ಟೆಂಪೋ ಟ್ರಾವೆಲ್ ರಗೆ ಅಂಕೋಲಾದಿಂದ ಯಲ್ಲಾಪುರ ಕ್ಕೆ ಹೋಗುತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಟೆಂಪೋ ಟ್ರಾವೆಲ್ ರನಲ್ಲಿದ್ದ ಬಸವರಾಜ್ ಅಣ್ಣಿಗೇರಿ (50),ಕೃಷ್ಣ ಅಣ್ಣಿಗೇರಿ (45), ಶಕುಂತಲಾ (45) ಅವರಿಗೆ ಗಂಬೀರವಾಗಿ ಗಾಯವಾಗಿದೆ. ಲಾರಿ ಚಾಲಕ ಘಟನಾ ಸ್ಥಳದಿಂದ ಪರಾರಿ ಯಾಗಿದ್ದಾನೆ. ಈ ಘಟನೆ ಸಂಬಂಧ ಅಂಕೋಲಾ ಪೊಲೀ ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.