ತಾಜ್ಮಹಲನ್ನು ‘ರಾಮ್ ಮಹಲ್’ ಅಥವಾ ‘ಕೃಷ್ಣಮಹಲ್’ ಎಂದು ಮರುಹೆಸರಿಸಿ : ಉ.ಪ್ರ BJP ಶಾಸಕ

ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಿಂದಲೇ ಗುರುತಿಸಿಕೊಂಡಿರುವ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಮತ್ತೊಂದು ಹೇಳಿಕೆ ನೀಡಿ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಜಗತ್ಪ್ರಸಿದ್ಧ ಐತಿಹಾಸಿಕ ಸ್ಮಾರಕವಾದ ‘ತಾಜ್ ಮಹಲ್’ ಅನ್ನು ಮರುನಾಮಕರಣ ಮಾಡಬೇಕು ಎಂದು ಶಾಸಕ ಸುರೇಂದ್ರ ಸಿಂಗ್ ಸೋಮವಾರ ಹೇಳಿದ್ದಾರೆ.

ರೊಹಾನಿಯಾ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಸುರೇಂದ್ರ ಸಿಂಗ್ ‘ ತಾಜ್ಮಹಲ್ ಎಂಬ ಹೆಸರನ್ನು ಬದಲಾಯಿಸಿ ರಾಮ್ ಮಹಲ್ ಅಥವಾ ಕೃಷ್ಣಮಹಲ್ ಎಂದು ಮರುನಾಮಕರಣ ಮಾಡಬೇಕು. ನನ್ನ ವೈಯಕ್ತಿಕ ಆಯ್ಕೆ ಎಂದರೆ ತಾಜ್ಮಹಲನ್ನು ‘ರಾಷ್ಟ್ರಭಕ್ತ ಮಹಲ್’ ಎಂದು ಕರೆಯುವುದು ‘ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೇ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಲ್ಲಿರುವ ಸುಪ್ರಸಿದ್ಧ ವಿಕ್ಟೋರಿಯಾ ಮ್ಯೂಸಿಯಂನ್ನು ‘ಜಾನಕಿ ಮಹಲ್’ ಎಂದು ಮರು ನಾಮಕರಣ ಮಾಡಬೇಕು ಎಂದು ಸುರೇಂದ್ರ ಸಿಂಗ್ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com