ಮೆಸ್ಸಿ ದಾಖಲೆ ಸರಿಗಟ್ಟಿದ ಸುನಿಲ್ ಚೆಟ್ರಿ : ಅಂತರಾಷ್ಟ್ರೀಯ ಫುಟ್ಬಾಲ್‍ನಲ್ಲಿ 64 ಗೋಲ್ ಸಾಧನೆ

ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಅರ್ಜೆಂಟೀನಾದ ಖ್ಯಾತ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ದಾಖಲೆಯನ್ನು ಸರಿಗಟ್ಟಿದ್ದಾರೆ. ಕೀನ್ಯಾ ವಿರುದ್ಧ ನಡೆದ ಇಂಟರ್ ಕಾಂಟಿನೆಂಟಲ್ ಕಪ್ ಫೈನಲ್ ಪಂದ್ಯದಲ್ಲಿ 64ನೇ ಅಂತರಾಷ್ಟ್ರೀಯ ಗೋಲ್ ಬಾರಿಸಿದ ಸುನಿಲ್, ಮೆಸ್ಸಿ ದಾಖಲೆ ಸರಿಗಟ್ಟಿದ್ದಾರೆ. 81 ಗೋಲ್ ಗಳನ್ನು ಬಾರಿಸಿರುವ ಪೋರ್ಚಗಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅಗ್ರಸ್ಥಾನದಲ್ಲಿದ್ದಾರೆ.

ಮುಂಬೈನ ಫುಟ್ಬಾಲ್ ಅರೆನಾ ಮೈದಾನದಲ್ಲಿ ಭಾನುವಾರ ನಡೆದ ಇಂಟರ್ ಕಾಂಟಿನೆಂಟಲ್ ಕಪ್ ಫೈನಲ್ ಪಂದ್ಯದಲ್ಲಿ ಕೀನ್ಯಾ ವಿರುದ್ಧ 2-0 ಗೋಲುಗಳಿಂದ ಜಯ ಗಳಿಸಿದೆ. ಇದರೊಂದಿಗೆ ಸುನಿಲ್ ಚೆಟ್ರಿ ನೇತೃತ್ವದ ಭಾರತ ಫುಟ್ಬಾಲ್ ತಂಡ ಇಂಟರ್ ಕಾಂಟಿನೆಂಟಲ್ ಕಪ್ ಅನ್ನು ತನ್ನದಾಗಿಸಿಕೊಂಡಿದೆ.

ಭಾರತದ ಪರವಾಗಿ ನಾಯಕ ಸುನಿಲ್ ಚೆಟ್ರಿ ಎರಡು ಗೋಲ್ಗಳನ್ನು ದಾಖಲಿಸಿದರು. ಟೂರ್ನಿಯುದ್ದಕ್ಕೂ ಅದ್ಭುತ ಫಾರ್ಮ್ ಪ್ರದರ್ಶಿಸಿರುವ ಸುನಿಲ್ ಚೆಟ್ರಿ, ಪಂದ್ಯದ ಮೊದಲರ್ಧದ 8ನೇ ಹಾಗೂ 29ನೇ ನಿಮಿಷದಲ್ಲಿ ಗೋಲ್ ಬಾರಿಸಿ ಭಾರತದ ಗೆಲುವಿಗೆ ಕಾರಣರಾದರು.

 

Leave a Reply

Your email address will not be published.

Social Media Auto Publish Powered By : XYZScripts.com