2ನೇ ಮದುವೆಗೆ ಮೊಹಮ್ಮದ್ ಶಮಿ ತಯಾರಿ..? : ಪತ್ನಿಯ ಆರೋಪಕ್ಕೆ ಕ್ರಿಕೆಟರ್ ಹೇಳಿದ್ದೇನು.?

ಕ್ರಿಕೆಟರ್ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸೀನ್ ಜಹಾನ್ ನಡುವಿನ ಬಿಕ್ಕಟ್ಟು ಯಾವುದೇ ಪರಿಹಾರವನ್ನು ಕಾಣದೇ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಕೆಲವು ದಿನಗಳ ಹಿಂದೆ ಶಮಿ ಪತ್ನಿ ಹಸೀನ್ ಜಹಾನ್ ‘ ಈದ್ ಬಳಿಕ ಮತ್ತೊಬ್ಬ ಮಹಿಳೆಯೊಂದಿಗೆ ಶಮಿ ಮದುವೆಯಾಗಲಿದ್ದಾರೆ. ಶಮಿ ನನಗೆ ಹಣದ ಆಮಿಷ ಒಡ್ಡಿದ್ದು ಡಿವೋರ್ಸ್ ನೀಡುವಂತೆ ಕೋರಿದ್ದಾರೆ ‘ ಎಂದು ಆರೋಪಿಸಿದ್ದರು.

Image result for mohammed shami

ಪತ್ನಿಯ ಆರೋಪದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಶಮಿ ‘ ಕಳೆದ ಕೆಲವು ತಿಂಗಳುಗಳಲ್ಲಿ ಹಸೀನ್ ಈ ರೀತಿಯ ಹಲವು ಆರೋಪಗಳನ್ನು ನನ್ನ ಮೇಲೆ ಮಾಡಿದ್ದಾಳೆ, ನಾನು 2ನೇ ಮದುವೆಯಾಗಲಿದ್ದೇನೆ ಎಂಬುದೂ ಸಹ ಅಂತಹುದೇ ಆರೋಪಗಳ ಸರಣಿಗೆ ಮತ್ತೊಂದು ಸೇರ್ಪಡೆ. ಹಾಗಾಗಿದ್ದೇ ಆದಲ್ಲಿ, ನನ್ನ ಎರಡನೇ ಮದುವೆಗೆ ಆಕೆಯನ್ನೂ ಆಹ್ವಾನಿಸುತ್ತೇನೆ ‘ ಎಂದಿದ್ದಾರೆ.

‘ ಮೊದಲ ಮದುವೆಯ ಕಾರಣದಿಂದ ಈಗಾಗಲೇ ನಾನು ಸಾಕಷ್ಟು ತೊಂದರೆಗೆ ಒಳಗಾಗಿದ್ದೇನೆ. ಈ ಪರಿಸ್ಥಿತಿಯಲ್ಲಿ ಇನ್ನೊಂದು ಮದುವೆಯಾಗುವಷ್ಟು ಮೂರ್ಖ ನಾನಲ್ಲ ‘ ಎಂದು ತಪಾಷೆ ಮಾಡಿದ್ದಾರೆ.

Leave a Reply

Your email address will not be published.