ಹಾಲಿವುಡ್ ನೀಲಿ ನಟಿ ಜೊತೆ ಸಿನಿಮಾ ಬಳಿಕ “ವೈರಸ್” ಹರಡಲು ಸಿದ್ಧರಾದ ಆರ್‌ಜಿವಿ !!

ಇತ್ತೀಚೆಗಷ್ಟೇ ಹಾಲಿವುಡ್‌ನ ನೀಲಿ ನಟಿ ಜೊತೆ ಗಾಡ್‌ ಸೆಕ್ಸ್‌ ಎಂಡ್‌ ಟ್ರೂತ್‌  ಸಿನಿಮಾದ ಟ್ರೇಲರ್‌ ರಿಲೀಸ್‌ ಮಾಡಿ ಭಾರೀ ಸುದ್ದಿಯಾಗಿದ್ದ ರಾಮ್‌  ವಿವಾದಾತ್ಮಕ ನಿರ್ದೇಶಕ ರಾಂ ಗೋಪಾಲ್ ವರ್ಮಾ ಈಗ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆ.
ಇತ್ತೀಚೆಗಷ್ಟೇ ನಾಗಾರ್ಜುನ ಅಕ್ಕಿನೇನಿ ಅಭಿನಯದ ಆಫೀಸರ್ ಸಿನಿಮಾ  ನಿರೀಕ್ಷಿತ ಮಟ್ಟ ತಲುಪದಿದ್ದರೂ ವರ್ಮಾ ಮತ್ತೊಂದು ಸಿನಿಮಾ ಮಾಡುತ್ತಿರುವುದಾಗಿ ಹೇಳಿದ್ದು, ಸಿನಿಮಾದ ಹೆಸರನ್ನೂ ಫೈನಲ್ ಮಾಡಿದ್ದಾರಂತೆ.
ಹೌದು ರಾಂ ಗೋಪಾಲ್‌ ವರ್ಮಾ ಅವರ ಮುಂದಿನ ಸಿನಿಮಾದ ಹೆಸರನ್ನು ವೈರಸ್ ಎಂದು ಇಡಲಾಗಿದೆ. ಸರ್ಕಾರ್‌ ಹಾಗೂ ಅಟ್ಯಾಕ್ಸ್‌ ಆಫ್‌ 26/11 ಸಿನಿಮಾ ನಿರ್ಮಿಸಿದ್ದ ಪರವ್‌ ಸಂಘವಿ ಈ ಸಿನಿಮಾವನ್ನೂ ನಿರ್ಮಾಣ ಮಾಡುತ್ತಿದ್ದಾರಂತೆ.
ಮಧ್ಯ ಆಫ್ರಿಕಾಕ್ಕೆ ಭೇಟಿ ನೀಡುವ ವಿದ್ಯಾರ್ಥಿಯೊಬ್ಬನಿಗೆ ಮಾರಣಾಂತಿಕ ಕಾಯಿಲೆ ಬರುತ್ತದೆ. ಆತ ಮುಂಬೈಗೆ ವಾಪಸಾದಾಗ ಆ ಕಾಯಿಲೆ ಮುಂಬೈನ ಜನರಿಗೂ ಹರಡುತ್ತದೆ ನಂತರ ಏನಾಗುತ್ತದೆ ಎಂಬುದೇ ಚಿತ್ರಕಥೆಯಂತೆ.
ಸದಾ ಒಂದಿಲ್ಲೊಂದು ಹೊಸತನ ಹುಡುಕುವ ಆರ್‌ಜಿವಿ ಈ ಬಾರಿ ಯಾವ ರೀತಿಯ ಸಿನಿಮಾ ಮಾಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

RGV यांनी वर पोस्ट केले 10 जून 2018

Leave a Reply

Your email address will not be published.

Social Media Auto Publish Powered By : XYZScripts.com