ಬೊಜ್ಜು ಕರಗಿಸಲು ಸಿಂಪಲ್‌ ಟಿಪ್ಸ್‌ : ಈ ಐದು ಸೂತ್ರಗಳನ್ನು ಪಾಲಿಸಿ ಕೊಬ್ಬನ್ನು ಇಲ್ಲವಾಗಿಸಿ….

ಬ್ಯುಸಿ ಜೀವನದಲ್ಲಿ ಜನರು ತಮ್ಮ  ಆರೋಗ್ಯದ ಬಗ್ಗೆ ಗಮನವನ್ನು ಕೊಡುವುದಿಲ್ಲ. ಬೆಳಗ್ಗೆ ಎದ್ದು ಕೆಲಸಕ್ಕೆ ಹೋದರೆ ಬರುವುದು ರಾತ್ರಿ ಊಟದ ಹೊತ್ತಿಗೆ. ಈ ಮಧ್ಯೆ ವ್ಯಾಯಾಮ, ಯೋಗ ಇವೆಲ್ಲವನ್ನೂ ಮರೆತೇ ಬಿಟ್ಟಿದ್ದಾರೆ.

ಇಂತಹ ಬ್ಯುಸಿ ಜೀವನದ ಮಧ್ಯೆ ಆರೋಗ್ಯದ ಬಗ್ಗೆ ಗಮನ ಕೊಡಲು ಸಾಧ್ಯವಾಗದೆ ಫಿಟ್ನೆಸ್ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇನ್ನು ಈ ಆಧುನಿಕ ಐಟಿಬಿಟಿ ಯುಗದಲ್ಲಿ ಆಫೀಸ್‌ನಲ್ಲಿ ಕುಳಿತುಕೊಂಡೇ ಕೆಲಸ ಮಾಡುವವರಿಗೆ ಬೊಜ್ಜು ಸಾಮಾನ್ಯ. ಇದಕ್ಕೆ ಹಾರ್ಮೋನ್‍ ವೈಪರಿತ್ಯ , ಕುಳಿತುಕೊಂಡೇ ಕೆಲಸ ಮಾಡುವುದು, ಅಜೀರ್ಣ, ಆಹಾರ ಪದ್ದತಿ, ಅತಿಯಾದ ಅಲ್ಕೋಹಾಲ್‍ ಸೇವನೆಯೇ ಕಾರಣ ಎಂದು ವೈದ್ಯರು ಹೇಳುತ್ತಾರೆ.

ಇಂತಹ ಬೊಜ್ಜನ್ನು ಕರಗಿಸಲು ಸಾಕಷ್ಟು ಟಿಪ್ಸ್‌ಗಳಿದ್ದು, ಈ ಕೆಳಗೆ ತಿಳಿಸಿದಂತೆ ಮಾಡಿದರೆ ಕೆಲವೇ ದಿನಗಳಲ್ಲಿ ಹೊಟ್ಟೆ ಸುತ್ತಲಿರುವ ಬೊಜ್ಜು ಕರಗುತ್ತದೆ.

ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದು, ಕನಿಷ್ಟ 10ರಿಂದ 15 ನಿಮಿಷಗಳಾದರು ನಡೆದಾಡಬೇಕು. ಮನೆಯಲ್ಲೇ ಮಾಡಿದರು ಉತ್ತಮ.  ಹೊರಗಡೆ ತಂಪಾದ ಗಾಳಿಯಲ್ಲಿ ನಡೆದಾಡುವುದ ಸೂಕ್ತ.  ಇದರಿಂದ ಜೀವರಾಸಾಯನಿಕ ಕ್ರಿಯೆಯ ಗತಿ ಉತ್ತಮಗೊಳ್ಳುತ್ತದೆ. ಇದನ್ನು ನೀವು ಸರಿಯಾಗಿ ಪಾಲಿಸಿದರೆ ಕೊಬ್ಬು ಕರಗುವುದು  ಖಂಡಿತ.

ಇನ್ನು ಆಹಾರದ ವಿಚಾರಕ್ಕೆ ಬಂದರೆ ಕೆಲವರು ಕೊಬ್ಬು ಕರಗಿಸಲು ಹೋಗಿ ಆಹಾರವನ್ನೇ ತ್ಯಜಿಸುತ್ತಾರೆ ಆದರೆ ಇದು ತಪ್ಪು. ಇದರಿಂದ ಜೀವರಾಸಯನಿಕ ಕ್ರಿಯೆಗಳು ಕುಠಿತಗೊಂಡು ಮೂಲ ಉದ್ದೇಶವಾದ ಬೊಜ್ಜು ಕರಗದೇ ಹೋಗಬಹುದು, ಹಾಗೂ ಬೆಳಗಿನ ಆಹಾರ ಮೆದುಳಿಗೆ ಅಗತ್ಯವಾಗಿ ಬೇಕಾಗುವುದರಿಂದ ಇದನ್ನು ಪಡೆಯದೇ ಹೋದರೆ ಮೆದುಳಿಗೆ ತಲುಪುವ ರಕ್ತದ ಪ್ರಮಾಣವು ಕಡಿಮೆಯಾಗುವುದು. ಹೆಚ್ಚಿನ ಪ್ರಮಾಣದಲ್ಲಿ ನಾರು ಇರುವ ಆಹಾರ ಅಂದರೆ ಹಸಿರು ಸಾಲಾಡ್‍, ಓಟ್ಸ್, ಅವಲಕ್ಕಿ ಮೊದಲಾದವುಗಳನ್ನು ಸೇವಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ.

ಅವೋಕಾಡೋ ಅಥವಾ ಬೆಣ್ಣೆ  ಹಣ್ಣಿನ ತಿರುಳಿನಲ್ಲಿ ಅಪಾರ ಪ್ರಮಾಣದ ಪೋಷಕಾಂಶಗಳಿರುವ ಕಾರಣ  ಇದು ಆರೋಗ್ಯಕ್ಕೆ ಉತ್ತಮ. ಕೊಬ್ಬು ಕರಗಿಸುವುದರಿಂದ ಹಿಡಿದು ಕ್ಯಾನ್ಸರ್ ನಿವಾರಣೆಗೂ ಉತ್ತಮ ಫಲಿತಾಂಶ ನೀಡುತ್ತದೆ. ಆಸ್ಪತ್ರೆಗಳಲ್ಲಿ ವೈದ್ಯರು ಕೂಡ ರೋಗಿಗಳಿಗೆ ಈ ಹಣ್ಣನ್ನು ಸೇವಿಸುವಂತೆ ಸೂಚಿಸುತ್ತಾರೆ.

ತೂಕ ಇಳಿಸಿಕೊಳ್ಳಲು ಆಹಾರದಲ್ಲಿ ಮೊಟ್ಟೆಯನ್ನು ಬಳಸುತ್ತಾರೆ. ದಿನಕ್ಕೆ ಎರಡು ಹೊತ್ತಾದರು ಒಂದ ಮೊಟ್ಟೆಯನ್ನು ಸೇವಿಸಿದರೆ ಸೊಂಟದ ಕೊಬ್ಬನ್ನು ಶೀಘ್ರದಲ್ಲಿ ಕರಗಿಸಬಹುದು. ಮತ್ತು ನಿಂಬೆರಸ ಸೇವಿಸುವುದರ ಮೂಲಕ ಸೊಂಟದ ಕೊಬ್ಬನ್ನು ಕರಗಿಸಬಹುದು.

ತೂಕ ಕಳೆದುಕೊಳ್ಳಬೇಕಾದರೆ ಅನಾರೋಗ್ಯಕರ  ಕಾರ್ಬೋಹೈಡ್ರೇಟುಗಳನ್ನು ಕಡಿಮೆ ಮಾಡಕೊಳ್ಳುವುದು ಅಗತ್ಯ. ಬಿಳಿ ಅನ್ನ, ಬಿಳಿ ಬ್ರೆಡ್‍, ಸಕ್ಕರೆ, ಪಾಸ್ತಾ, ಪಿಜ್ಜಾ ಮತ್ತು ಬೇಕರಿ ಉತ್ಪನ್ನಗಳನ್ನು ಕಡಿಮೆ ಮಾಡುವುದು ಉತ್ತಮ.

ಈ ಮೇಲಿನ  ಸಲಹೆಗಳನ್ನು ಸರಿಯಾಗಿ ಪಾಲಿಸಿದರೆ ಹೊಟ್ಟೆಯ ಸುತ್ತವಿರುವ ಬೊಜ್ಜು ಕೆಲವೇ ದಿನಗಳಲ್ಲಿ ಕರಗುತ್ತದೆ.

 

 

 

 

 

 

 

Leave a Reply

Your email address will not be published.

Social Media Auto Publish Powered By : XYZScripts.com