Tennis : 11ನೇ ಬಾರಿ ಫ್ರೆಂಚ್ ಓಪನ್ ಗೆದ್ದ ನಡಾಲ್ : ಡಾಮಿನಿಕ್ ಥೀಮ್ ಪರಾಭವ

ಸ್ಪೇನ್ ದೇಶದ ರಫೆಲ್ ನಡಾಲ್ ಫ್ರೆಂಚ್ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ಪ್ಯಾರಿಸ್ ನ ರೊಲ್ಯಾಂಡ್ ಗ್ಯಾರೊಸ್ ಅಂಗಳದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರಿಯಾದ ಡಾಮಿನಿಕ್ ಥೀಮ್ ಅವರನ್ನು 6-4, 6-3, 6-2 ರಿಂದ ಮಣಿಸಿದ ನಡಾಲ್ 11ನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಫೈನಲ್ ನಲ್ಲಿ ಪರಾಭವಗೊಂಡ 25 ವರ್ಷದ ಡಾಮಿನಿಕ್ ಥೀಮ್ ಅವರ ಫ್ರೆಂಚ್ ಓಪನ್ ಪ್ರಶಸ್ತಿ ಗೆಲ್ಲುವ ಕನಸು ಭಗ್ನವಾಗಿದೆ. ಇದು ರಫೆಲ್ ನಡಾಲ್ ಅವರ ವೃತ್ತಿ ಜೀವನದ 17ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯಾಗಿದೆ. ಜಾಗತಿಕ ಟೆನಿಸ್ ಲೋಕದಲ್ಲಿ ನಡಾಲ್ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಸ್ವಿಟ್ಜರ್ ಲೆಂಡಿನ ರೋಜರ್ ಫೆಡರರ್ 20 ಗ್ರ್ಯಾಂಡ್ ಸ್ಲ್ಯಾಮ್ ಗಳ ಒಡೆಯರಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com