ವಿಜಯಪುರ : ಅನಾರೋಗ್ಯದಿಂದ ಮಾಜಿ ಸಚಿವ ಬಿ.ಎಸ್ ಪಾಟೀಲ್ ಸಾಸನೂರ ವಿಧಿವಶ

ವಿಜಯಪುರ : ಮಾಜಿ ಸಚಿವ ಬಿ ಎಸ್ ಪಾಟೀಲ ಸಾಸನೂರ ವಿಜಯಪುರದ ಬಿಎಲ್ ಡಿ ಇ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ದಾಖಲಾಗಿದ್ದ ಪಾಟೀಲ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಹಾಲಿ ದೇವರಹಿಪ್ಪರಗಿ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರ ತಂದೆ ಬಿ ಎಸ್ ಪಾಟೀಲ್ ಅವರು ಹೂವಿನ ಹಿಪ್ಪರಗಿ ಕ್ಷೇತ್ರದಿಂದ ಒಟ್ಟು ಐದು ಬಾರಿ ಕಾಂಗ್ರೆಸ್ ಶಾಸಕರಾಗಿದ್ದರು.

ಮೃತರ ಅಂತ್ಯಕ್ರಿಯೆ ನಾಳೆ ಹಿರೂರಿನಲ್ಲಿ ನಡೆಯಲಿದೆ. ನಾಳೆ ಸಾಸನೂರಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ದಿವಂಗತ ಬಿ ಎಸ್ ಪಾಟೀಲ್ ಬಸನಗೌಡ ಸಂಗನಗೌಡ ಪಾಟೀಲ್ ಸಾಸನೂರ ಅವರು ಎರಡು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com