WATCH : ‘ಧಡಕ್’ ಚಿತ್ರದ ಟ್ರೇಲರ್ : ಮೊದಲ ಬಾರಿ ನಾಯಕಿಯಾಗಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್

ಖ್ಯಾತ ನಟಿ ದಿವಂಗತ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್ ಬಾಲಿವುಡ್ ಅಂಗಳಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಜಾಹ್ನವಿ ಕಪೂರ್ ಅಭಿನಯದ ಮೊದಲ ಚಿತ್ರ ‘ಧಡಕ್’ ನ ಟ್ರೇಲರ್ ಬಿಡುಗಡೆಗೊಂಡಿದೆ. 2016ರಲ್ಲಿ ಮರಾಠಿ ಭಾಷೆಯಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ‘ಸೈರಾಟ್’ ಚಿತ್ರದ ಕಥೆಯನ್ನಾಧರಿಸಿರುವ ‘ಧಡಕ್’ ಸಿನೆಮಾದಲ್ಲಿ ಜಾಹ್ನವಿ ನಾಯಕಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Image result for dhadak trailer

Image result for dhadak trailer

ಬಾಲಿವುಡ್ ನಟ ಶಾಹಿದ್ ಕಪೂರ್ ಅವರ ಸೋದರ ಇಶಾನ್ ಖಟ್ಟರ್ ಕೂಡ ‘ಧಡಕ್’ ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಿದ್ದು, ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕರಣ್ ಜೋಹರ್ ಮಾಲೀಕತ್ವದ ಧರ್ಮ ಪ್ರೊಡಕ್ಷನ್ಸ್ ಹಾಗೂ ಜೀ ಸ್ಟುಡಿಯೋಸ್ ಸಾರಥ್ಯದಲ್ಲಿ ನಿರ್ಮಾಣಗೊಂಡಿರುವ ‘ಧಡಕ್’ ಚಿತ್ರವನ್ನು ಅಜಯ್-ಅತುಲ್ ನಿರ್ದೇಶಿಸಿದ್ದಾರೆ. ಇಶಾನ್ ಖಟ್ಟರ್ ಹಾಗೂ ಜಾಹ್ನವಿ ಕಪೂರ್ ಪಾದಾರ್ಪಣೆ ಚಿತ್ರವಾಗಿರುವ ‘ಧಡಕ್’ ಜುಲೈ 20ರಂದು ತೆರೆಗೆ ಬರಲಿದೆ.

Leave a Reply

Your email address will not be published.