ನಾನು ಓದಿದ್ದು 8ನೇ ಕ್ಲಾಸು, ಪ್ಲೀಸ್‌ ನಂಗೆ ಬೇರೆ ಖಾತೆ ಕೊಡಿ : ಸಿಎಂ ಗೆ G.T ದೇವೇಗೌಡ ಮನವಿ

ಬೆಂಗಳೂರು : ಒಂ ದೆಡೆ ಮಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅನೇಕ ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ ಮತ್ತೊಂದೆಡೆ ಜಿ.ಟಿ ದೇವೇಗೌಡರು ತಮಗೆ ನೀಡಿರುವ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿ.ಟಿ ದೇವೇಗೌಡರಿಗೆ ಕುಮಾರಸ್ವಾಮಿ ಸಂಪುಟದಲ್ಲಿ ಉನ್ನತ ಶಿಕ್ಷಣ ಖಾತೆ ನೀಡಲಾಗಿತ್ತು. ಆದರೆ ನಾನು ಓದಿರುವುದು ಕೇವಲ 8ನೇ ತರಗತಿಯವರೆ ಗೆ ಮಾತ್ರ. ಆದ್ದರಿಂದ ನನಗೆ ಆ ಹುದ್ದೆ ಬೇಡ ಎಂದು ಜಿಟಿಡಿ ಖಾತೆ ಬದಲಿಸುವಂತೆ ಕುಮಾರಸ್ವಾಮಿಯವರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ  ಇಬ್ಬರ ಮಧ್ಯೆ ಮಾತುಕತೆ ನಡೆದಿದ್ದು ಖಾತೆ ಬದಲಾವಣೆಗೆ ಕುಮಾರಸ್ವಾಮಿ ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಿ.ಟಿ ದೇವೇಗೌಡರು ತನಗೆ ಸಹಕಾರ ಅಥವಾ ಅಬಕಾರಿ ಖಾತೆ ಕೊಡಿ ಎಂದು ಸಿಎಂ ಬಳಿ ಮನವಿ ಮಾಡಿರುವುದಾಗಿ ಹೇಳಲಾಗಿದೆ. 8ನೇ ತರಗತಿ ಓದಿದ್ದ ಜಿ.ಟಿ ದೇವೇಗೌಡರಿಗೆ ಉನ್ನತ ಶಿಕ್ಷಣ ಸಚಿವ ಸ್ಥಾನ ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ, ಆಕ್ರೋಶ ವ್ಯಕ್ತವಾಗಿತ್ತು. ಕಡಿಮೆ ಕಲಿತಿದ್ದರೂ, ಉನ್ನತ ಶಿಕ್ಷಣ ಸಚಿವ ಸ್ಥಾನ ಎಂದು ವ್ಯಂಗ್ಯಮಾಡಲಾಗಿತ್ತು. ಇದರಿಂದಾಗಿ ಜಿಟಿಡಿ ಉನ್ನತ ಶಿಕ್ಷಣ ಸಚಿವ ಸ್ಥಾನ ಕೈಬಿಟ್ಟು ಸಹಕಾರ ಖಾತೆ ನೀಡುವಂತೆ ಮನವಿ ಮಾಡಿರುವುದಾಗಿ ತಿಳಿದುಬಂದಿದೆ.

 

Leave a Reply

Your email address will not be published.

Social Media Auto Publish Powered By : XYZScripts.com