ಸಿದ್ದರಾಮಯ್ಯನವರಿಗೆ ಮತ್ತೊಂದು ಮದುವೆ ಮಾಡಿಸ್ತಾರಂತೆ ಈ ಶಾಸಕ…ಯಾಕೆ ?

ಬಾಗಲಕೋಟೆ : ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮದುವೆಯಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ ಈಗ ಮತ್ತೆ ಸಿದ್ದರಾಮಯ್ಯನವರಿಗೆ ಮದುವೆ ಮಾಡಿಸುವ ಮಾತು ಕೇಳಿಬರುತ್ತಿದೆ.

ಹೌದು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ  71 ವರ್ಷ ಅಲ್ಲ. ಅವರಿಗಿನ್ನೂ 21 ವರ್ಷ. ಅವರಿಗೆ ನಾನು ಇನ್ನೊಂದು ಮದುವೆ ಮಾಡಿಸಬೇಕೆಂದಿದ್ದೇನೆ ಎಂದು ಬಾದಾಮಿಯ ಮಾಜಿ ಶಾಸಕ ಬಿ.ಬಿ ಚಿಮ್ಮನಕಟ್ಟಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಬಾದಾಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರನ್ನು ಬಾದಾಮಿಯಲ್ಲಿ ಸೋಲಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಅದಕ್ಕಾಗಿ ಏನೆಲ್ಲಾ ಮಾಡಿದ್ದರು ಎಂಬುದೂ ನಮಗೆ ತಿಳಿದಿದೆ. ನಾವು ಸ್ವಲ್ಪ ಸಡಿಲಬಿಟ್ಟಿದ್ದರೂ, ಇಲ್ಲಿ  ಸಿದ್ದರಾಮಯ್ಯನವರನ್ನು ಸೋಲಿಸುತ್ತಿದ್ದರು. ಆದರೆ ಜನತೆ ವಿರೋಧ ಪಕ್ಷದವರ ಷಡ್ಯಂತ್ರಕ್ಕೆ ಇಲ್ಲಿನ ಜನ ಮಣಿಯಲಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com