ನಾನು ಹೆದರುವುದು , ತಲೆ ಬಾಗುವುದು ಏನಿದ್ದರೂ ಮನುಷ್ಯತ್ವಕ್ಕೆ ಮಾತ್ರ ಎಂದ ಸಿದ್ದರಾಮಯ್ಯ….

ಬಾಗಲಕೋಟೆ : ನಾನು ಬಾದಾಮಿಯಿಂದ ಸ್ಪರ್ಧಿಸಬೇಕೆಂದುಕೊಂಡಿರಲಿಲ್ಲ. ಉತ್ತರ ಕರ್ನಾಟಕದ ಅನೇಕ ಮುಖಂಡರು ಸ್ಪರ್ಧಿಸಲು ಒತ್ತಾಯ ಮಾಡಿದರು. ಅಂತಿಮವಾಗಿ ಚಿಮ್ಮನಕಟ್ಟಿ, ಆರ್ ಬಿ ತಿಮ್ಮಾಪುರ, ಎಸ್ ಆರ್ ಪಾಟಿಲ್ ,ಹೆಚ್ ವೈ ಮೇಟಿ, ನಂಜಯ್ಯನಮಠ ಎಲ್ಲರೂ ಒತ್ತಾಯ ಮಾಡಿದರು ಅದಕ್ಕಾಗಿ  ನಿಂತಿದ್ದೆ. ಆದರೆ ನೀವೇ ನನ್ನ ಕೈ ಹಿಡಿದಿರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬಾದಾಮಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ಆದಾಗ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂಬ ಕೂಪಗಳು ಹೋಗಬೇಕು. ಅಖಂಡ ಕರ್ನಾಟಕ ಎಂಬ ಭಾವನೆ ಬರಬೇಕು. ನಾವೆಲ್ಲ ಅಖಂಡ ಕರ್ನಾಟಕದ ಕನ್ನಡಿಗರು ಎಂದುಕೊಂಡಿದ್ದೆ. ಅನ್ನಭಾಗ್ಯ ಯೋಜನೆ ವೇಳೆ ಬಿಜೆಪಿಯವರು ಟೀಕೆ ಮಾಡಿದರು. ಆದರೆ ನಮ್ಮ ಸರ್ಕಾರ ಎಲ್ಲವನ್ನು ಎದುರಿಸಿ ಲಕ್ಷಾಂತರ ಮಂದಿಗೆ ಅನ್ನ ನೀಡಿದೆ ಎಂದಿದ್ದಾರೆ.

ಇದೇ ವೇಳೆ ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದ ಸಿದ್ದರಾಮಯ್ಯ, ಮಿಸ್ಟರ್ ಮೋದಿ, ಮಿಸ್ಟರ್ ಅಮಿತ್ ಶಾ, ಮಿಸ್ಟರ್ ಯಡಿಯೂರಪ್ಪ
ಉಚಿತ ಅಕ್ಕಿ ಎಲ್ಲಿಯಾದರೂ ಕೊಟ್ಟಿದ್ದೀರಾ ಹೇಳಿ ಎಂದು ಪ್ರಶ್ನಿಸಿದ್ದು, ಉಚಿತ ಅಕ್ಕಿ ಕೊಟ್ಟದ್ದು ದೇಶದಲ್ಲಿ ನಮ್ಮ ರಾಜ್ಯದಲ್ಲೇ ಮೊದಲು. ನಮ್ಮ ಅಭಿವೃದ್ಧಿ ಕಾರ್ಯದ ಬಗ್ಗೆ ಮೋದಿ,  ಶಾ ಉತ್ತರ ಕೊಡುತ್ತಾರಾ ಎಂದಿದ್ದಾರೆ.

ಎಷ್ಟೆಲ್ಲ ಅಭಿವೃದ್ಧಿ ಕಾರ್ಯ ಮಾಡಿದರೂ ಜನರು ನಮಗೆ ಓಟ್ ಕೊಡಲಿಲ್ಲ.  ರಾಜ್ಯದಲ್ಲಿ 13 ಬಜೆಟ್ ‌ಮಂಡಿಸಿದ್ದೇನೆ. ಮಹದಾಯಿ ವಿಚಾರವಾಗಿ ನಮ್ಮ ಕೈಲಾದ ಕೆಲಸ ಮಾಡಿದ್ದೇವೆ. ಇದನ್ನು ಮೋದಿಯೇ ಪರಿಹರಿಸಬೇಕು. ಆದರೆ ಮೋದಿ ಮಹಾದಾಯಿ ವಿಚಾರದಲ್ಲಿ ಚಕಾರ ಎತ್ತುತ್ತಿಲ್ಲ. ಅವರು ಪ್ರಯತ್ನಿಸಬಹುದಿತ್ತಲ್ಲವಾ, ಚುನಾವಣೆ ವೇಳೆ ಬಗೆಹರಿಸುತ್ತೇನೆ ಅಂತ ಬಂದ್ರು, ವಾಪಸ್‌ ಹೋದ್ರು ಅಷ್ಟೇ ಎಂದಿದ್ದಾರೆ.

ಕರ್ನಾಟಕ ಹಸಿವು ಮುಕ್ತ, ಗುಡಿಸಲು‌ ಮುಕ್ತ ರಾಜ್ಯ ಮಾಡಬೇಕೆಂದುಕೊಂಡಿದ್ದೆವು. ಆದರೆ ಜನ ಆಶಿರ್ವಾದ ಮಾಡಲಿಲ್ಲ. ನಾವು ಜೆಡಿ ಎಸ್ ನವರು ಚುನಾವಣೆ ವೇಳೆ ಸಾಕಷ್ಟು ಆರೋಪ ಪ್ರತ್ಯಾರೋಪ ಮಾಡಿದ್ದೆವು. ಆದರೆ ಪರಿಸ್ಥಿತಿ ಆತಂತ್ರವಾಯಿತು. ಕೋಮುವಾದಿ ಬಿಜೆಪಿ ಪಕ್ಷ ದೂರ ಇಡಲು ನಾವು ಸಮ್ಮಿಶ್ರ ಸರಕಾರ ಮಾಡಿದೆವು. ಯಡಿಯೂರಪ್ಪ ಮೂರು ದಿನ ಮುಖ್ಯ ಮಂತ್ರಿ ಆದರು ನಾಚಿಕೆಯಾಗಬೇಕು ಅವರಿಗೆ. ನಮಗೆ ಬೆಂಬಲಿಸಿ ನಮ್ಮ‌ ಜೊತೆ ಬನ್ನಿ ಎಂದು ೫೦ ಕೋಟಿ, ನೂರು ಕೋಟಿ ಕೊಡುತ್ತೇವೆ ಎನ್ನುತ್ತಿದ್ದರು. ನಮ್ಮ ಎಮ್ ಎಲ್ ಎ ಗಳು ಆಮಿಷಗಳಿಗೆ ಬಲಿಯಾಗಲಿಲ್ಲ. ನಮ್ಮ ಸೋಲಿಗೆ ಮೋದಿ,ಶಾ,ಯಡಿಯೂರಪ್ಪ ಅಪಪ್ರಚಾರ ಕಾರಣ ಎಂದಿದ್ದಾರೆ.

 

ನನಗೆ ರಾಜಕೀಯ ದಲ್ಲಿ ಹೆದರಿಕೆ ಅಂದರೆನೆ ಗೊತ್ತಿಲ್ಲ. ಮನುಷ್ಯತ್ವಕ್ಕೆ ಹೆದರುತ್ತೇನೆ ತಲೆಬಾಗುತ್ತೇನೆ. ಆದರೆ ರಾಜಕೀಯ ದಲ್ಲಿ ನಾನು ಎಂದೂ ಹೆದರೋದಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಜನರು ರಾಜಕೀಯ ಷಡ್ಯಂತ್ರ, ಕುತಂತ್ರಗಳಿಗೆ ಬಲಿಯಾದರು. ಆದರೆ ನೀವು ಬಲಿಯಾಗಲಿಲ್ಲಆದ್ದರಿಂದ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆ ಎಂದಿದ್ದಾರೆ.

 

2 thoughts on “ನಾನು ಹೆದರುವುದು , ತಲೆ ಬಾಗುವುದು ಏನಿದ್ದರೂ ಮನುಷ್ಯತ್ವಕ್ಕೆ ಮಾತ್ರ ಎಂದ ಸಿದ್ದರಾಮಯ್ಯ….

Leave a Reply

Your email address will not be published.