ಆಸ್ಪತ್ರೆಗೆ ದಾಖಲಾದ ಅಜಾತಶತ್ರು, ಬಿಜೆಪಿ ನಾಯಕ ಅಟಲ್‌ ಬಿಹಾರಿ ವಾಜಪೇಯಿ

ದೆಹಲಿ : ಭಾರತದ ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಷ್ಟ್ರೀಯ  ಮಾಧ್ಯಮಗಳು ವರದಿ ಮಾಡಿವೆ.
ಅನೇಕ ವರ್ಷಗಳಿಂದ ಅಟಲ್‌ ಬಿಹಾರಿ ವಾಜಪೇಯಿ ಅವರು  ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ರುಟೀನ್‌ ಚೆಕಪ್‌ಗಾಗಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ. ಏಮ್ಸ್‌ ನಿರ್ದೇಶಕರ ಡಾ. ರಣದೀಪ್‌ ಗುಲಾರಿಯಾ ಅವರು ವಾಜಪೇಯಿ ಅವರ ಆರೋಗ್ಯದ ಸಂಪೂರ್ಣ ನಿಗಾ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ವಾಜಪೇಯಿ ಅವರು ಮೂರು ಬಾರಿ ಭಾರತದ ಪ್ರಧಾನಿಯಾಗಿದ್ದು, 1994ರಲ್ಲಿ ಭಾರತದ ಉತ್ತಮ ಸಂಸತ್‌ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಲ್ಲದೆ2015ರಲ್ಲಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ  ಗೌರವಿಸಲಾಗಿತ್ತು.

One thought on “ಆಸ್ಪತ್ರೆಗೆ ದಾಖಲಾದ ಅಜಾತಶತ್ರು, ಬಿಜೆಪಿ ನಾಯಕ ಅಟಲ್‌ ಬಿಹಾರಿ ವಾಜಪೇಯಿ

Leave a Reply

Your email address will not be published.

Social Media Auto Publish Powered By : XYZScripts.com