ಫ್ರೆಂಚ್ ಓಪನ್-2018 : ಸಿಮೋನಾ ಹಾಲೆಪ್ ಮುಡಿಗೆ ಮಹಿಳೆಯರ ಸಿಂಗಲ್ಸ್ ಕಿರೀಟ

ರೋಮಾನಿಯನ್ ಟೆನಿಸ್ ಆಟಗಾರ್ತಿ ಸಿಮೋನಾ ಹಾಲೆಪ್ 2018ನೇ ಸಾಲಿನ ಫ್ರೆಂಚ್ ಓಪನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಗರದ ರೊಲ್ಯಾಂಡ್ ಗ್ಯಾರೊಸ್ ಮೈದಾನದಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಸಿಮೋನಾ ಹಾಲೆಪ್ ಜಯಗಳಿಸಿದ್ದಾರೆ. ಈ ಮೂಲಕ 26 ವರ್ಷದ ಸಿಮೋನಾ ಹಾಲೆಪ್ ವೃತ್ತಿ ಜೀವನದ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

26ನೇ ಶ್ರೇಯಾಂಕಿತ ಟೆನಿಸ್ ಆಟಗಾರ್ತಿ ಅಮೇರಿಕಾದ ಸ್ಲೋಯೆನ್ ಸ್ಟೀಫನ್ಸ್ ವಿರುದ್ಧ ಹಾಲೆಪ್ 3-6, 6-4, 6-1 ಪಾಯಿಂಟ್ ಗಳಿಂದ ಗೆಲುವು ಸಾಧಿಸಿದರು. ಮೊದಲ ಸೆಟ್ 3-6ರಿಂದ ಸೋತು ಹಿನ್ನಡೆ ಎದುರಿಸಿದ 26 ವರ್ಷದ ಹಾಲೆಪ್, 6-4 ರಿಂದ ಎರಡನೇ ಸೆಟ್ ಗೆದ್ದು ಭರ್ಜರಿ ಕಮ್ ಬ್ಯಾಕ್ ಮಾಡಿದರು. ಮೂರನೇ ಸೆಟ್ ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಹಾಲೆಪ್ ಎದುರಾಳಿಗೆ ಯಾವುದೇ ಅವಕಾಶ ನೀಡಲಿಲ್ಲ.

 

Leave a Reply

Your email address will not be published.

Social Media Auto Publish Powered By : XYZScripts.com