RSS ಕಾರ್ಯಕ್ರಮದಲ್ಲಿ ಪ್ರಣಬ್‌ ಮುಖರ್ಜಿ ಭಾಗಿ : ಕಾಂಗ್ರೆಸ್ ಆಯ್ತು ಈಗ JDSನಿಂದಲೂ ತರಾಟೆ

ದೆಹಲಿ: ಆರ್ ಎಸ್‍ ಎಸ್‍ ಪ್ರಧಾನ ಕಚೇರಿಗೆ  ಮಾಜಿ ರಾಷ್ಟ್ರಪತಿ ಪ್ರಣಬ್‍ ಮುಖರ್ಜಿ ಭೇಟಿ ನೀಡಿದ್ದಕ್ಕೆ ರಾಜಕೀಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಲೇ ಇದೆ.  ನಿನ್ನೆಯಷ್ಟೆ ಕಾಂಗ್ರೆಸ್‍ ಈ ಬಗ್ಗೆ  ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ ಕರ್ನಾಟಕದ ಕಾಂಗ್ರೆಸ್‍ನ ಮಿತ್ರ ಪಕ್ಷವಾಗಿರುವ ಜೆಡಿಎಸ್‍ ಸಹ ವಾಗ್ದಾಳಿ ನಡೆಸಿದೆ.

ಕಳೆದ ಎರಡು ದಿನಗಳ ಹಿಂದೆ ನಾಗ್ಪುರದಲ್ಲಿ ನಡೆದ ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ,  ಆರ್ ಎಸ್‍ ಎಸ್‍ನ ಸಂಸ್ಥಾಪಕ ಕೇಶವ್‍ ಬಿ ಹೆಡಗೇವಾರ್ ರನ್ನು ಭಾರತ ಮಾತೆಯ ಹೆಮ್ಮೆಯ ಪುತ್ರ ಎಂದು ಹೊಗಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ಜೆಡಿಎಸ್‌ ಪ್ರಣಬ್ ಮುಖರ್ಜಿ ಅವರು ನಾಗ್ಪುರಕ್ಕೆ ಹೋಗಬಾರದಿತ್ತು. ಅವರ ಭಾಷಣವನ್ನು ಜನ ನೆನಪಿಸಿಕೊಳ್ಳುವುದಿಲ್ಲ. ಆರ್‌ಎಸ್‌ಎಸ್‌ನಂತಹ ದೇಶದ್ರೋಹಿ ಸಂಘಟನೆಯ ಕಾರ್ಯಕ್ರಮಕ್ಕೆ ಪ್ರಣಬ್‌ ಮುಖರ್ಜಿ ಅವರು ಹೋಗಿ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತಂದುಕೊಂಡಿದ್ದಾರೆ ಎಂದು ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್‌ ಅಲಿ ಕಿಡಿಕಾರಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com