ಶರತ್ ಹತ್ಯೆಯಲ್ಲಿ ರಮಾನಾಥ ರೈ ಕೈವಾಡ : ಶ್ರೀನಾಲ್ವರು ದೇವರ ಮೊರೆಹೋದ ಮಾಜಿ ಶಾಸಕ

ಮಂಗಳೂರು : ಆರ್‌ಎಸ್ಎಸ್ ಮುಂಖಂಡ ಶರತ್ ಮಡಿವಾಳ ಹತ್ಯೆ ಪ್ರಕರಣ ಸಂಬಂಧ ಕೇರಳದ ಕಾನತ್ತೂರು ಶ್ರೀ ನಾಲ್ವರು ದೇವಸ್ಥಾನಕ್ಕೆ ಬಂಟ್ವಾಳದ ಮಾಜಿ ಶಾಸಕ ರಮಾನಾಥ ರೈ ದೂರು ನೀಡಿದ್ದಾರೆ.


ಕೊಲೆಯ ಹಿಂದೆ ರೈ ಕೈವಾಡ ಎಂಬ ಆರೋಪ ಹಿನ್ನಲೆಯಲ್ಲಿ ಕಾನತ್ತೂರು ದೇವರ ಮೊರೆ ಹೋಗಿದ್ದಾರೆ. ಶರತ್ ಮಡಿವಾಳ ತಂದೆ ತನಿಯಪ್ಪ ಸೇರಿದಂತೆ ಹಲವರು ಶರತ್‌ ಮಡಿವಾಳ ಹತ್ಯೆ ಹಿಂದೆ  ರಮಾನಾಥ ರೈ ಕೈವಾಡ ಇದೆ ಎಂದು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ದೇವಾಲಯಕ್ಕೆ ಆಗಮಿಸಿದ ರಮಾನಾಥ ರೈ, ನಾನು ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ, ಇಲ್ಲದಿದ್ದರೆ ಆರೋಪ ಮಾಡಿದವರಿಗೆ ಹಾಗೂ ಕೊಲೆಗಾರರಿಗೆ ಮತ್ತು ಅದರ ಹಿಂದಿರುವವರಿಗೆ ಶಿಕ್ಷೆಯಾಗಲಿ ಎಂದು ಹರಕೆ ಹೊತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com