ರಂಜಾನ್‌ ವೇಳೆ ದೇವರ ಕೃಪೆಗೆ ಪಾತ್ರನಾಗಲು ಹೆತ್ತ ಮಗಳ ಕತ್ತು ಸೀಳಿ ಕೊಂದ ಪಾಪಿ ತಂದೆ !!

ಜೋಧಪುರ್ : ದೇವರ ಕೃಪೆಗೆ ಪಾತ್ರವಾಗಬೇಕೆಂದು ತನ್ನ 4ವರ್ಷದ ಮಗಳ ಕತ್ತು ಸೀಳಿ ಕೊಲೆ ಮಾಡಿರುವ ವಿಚಿತ್ರ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ನವಾಜ್‍ ಅಲಿ ಎಂಬಾತ ತನ್ನ 4ವರ್ಷದ ಮಗಳಾದ ರಿಝ್ವಾನಾಳನ್ನು ಕಳೆದ ಗುರುವಾರ ಕೊಲೆ ಮಾಡಿ, ಬಳಿಕ ಶವವನ್ನು ಕೋಣೆಯಲ್ಲೇ ಇರಿಸಿ ತನ್ನ ಪಾಡಿ ಏನು ನಡೆದೇ ಇಲ್ಲ ಎಂಬಂತೆ ಮನೆಯಲ್ಲೇ ಮಲಗಿಕೊಂಡಿದ್ದ. ಮರುದಿನ ಬಾಲಕಿಯನ್ನು  ಕುಟುಂಬಸ್ಥರು ಎಲ್ಲ ಕಡೆ ಹುಡುಕಿದ್ದು, ಈ ವೇಳೆ ನೆಲಮಹಡಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ.

ಕೂಡಲೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಈ ವೇಳೆ ತಂದೆ ನವಾಜ್‌ ನೇ ಹೆತ್ತ ಮಗಳನ್ನು ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ.

ವಿಚಾರಣೆ ವೇಳೆ ನವಾಜ್‌ ತಪ್ಪೊಪ್ಪಿಕೊಂಡಿದ್ದು, ಅಲ್ಲಾಹುವಿನ ಕೃಪೆಗಾಗಿ ನಾನೇ ಮಗಳನ್ನು ಕೊಂದಿದ್ದೇನೆ. ರಾತ್ರಿ ಎಲ್ಲರೂ ಮಲಗಿದ ಮೇಲೆ ಮಗಳನ್ನು ನೆಲಮಹಡಿಗೆ ಕರೆದುಕೊಂಡು ಹೋಗಿ ನನ್ನ ಕಾಲ ಮೇಲೆ ಆಕೆಯನ್ನು ಕೂರಿಸಿಕೊಂಡು ಕುರಾನ್ ಪಠಣ ಮಾಡಿ ಬಳಿಕ ಆಕೆಯ ಕತ್ತು ಸೀಳಿ ಹತ್ಯೆ ಮಾಡಿರುವುದಾಗಿ ಹೇಳಿದ್ದಾರೆ.

ಪವಿತ್ರ ಹಬ್ಬವಾದ ರಂಜಾನ್‍ ನಲ್ಲಿ ರೋಜಾ ನಡೆಸುವ ಮುಸ್ಲೀಮರು  ಪುಣ್ಯದ ಕೆಲಸ ಮಾಡಿದರೆ ದೇವರ ಕೃಪೆಗೆ ಪಾತ್ರರಾಗುತ್ತಾರೆ ಎಂಬುದು ಮುಸ್ಲೀಮರ ನಂಬಿಕೆ. ಆದರೆ ನವಾಜ್‍ ದೇವರ ಕೃಪೆಗೆ ಪಾತ್ರನಾಗಲು ಮಗಳನ್ನು ಕೊಲೆ ಮಾಡಿ ಶಿಕ್ಷೆ ಅನುಭವಿಸುತ್ತಿದ್ದಾನೆ.

Leave a Reply

Your email address will not be published.

Social Media Auto Publish Powered By : XYZScripts.com