ದ.ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರೆಲ್ಲರೂ ನನ್ನ ಮಿತ್ರರು ಎಂದ ಕಾಂಗ್ರೆಸ್ ಸಚಿವ U.T ಖಾದರ್ !

ಮಂಗಳೂರು : ದಕ್ಷಿಣ ಕನ್ನಡದಲ್ಲಿ 7 ಬಿಜೆಪಿ ಶಾಸಕರಿದ್ದಾರೆ ಅವರು ನನ್ನ ವೈರಿಗಳಲ್ಲ ಮಿತ್ರರು. ನಾವೆಲ್ಲಾ ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಕಾಂಗ್ರೆಸ್‌ ನಾಯಕ ಯು.ಟಿ ಖಾದರ್‌ ಹೇಳಿದ್ದಾರೆ.

ರಾಜ್ಯದ ನೂತನ ಮೈತ್ರಿ‌ ಸರಕಾರದಲ್ಲಿ ನಗರಾಭಿವೃದ್ಧಿ ಹಾಗೂ ವಸತಿ ಸಚಿವರಾಗಿ ಅಧಿಕಾರ‌ ಸ್ವೀಕರಿಸಿದ ಯುಟಿ ಖಾದರ್, ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸರಿಯಲ್ಲ. ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 7 ರಲ್ಲಿ ಬಿಜೆಪಿ ಶಾಸಕರಿದ್ದಾರೆ. ಹಾಗಾಗಿ ನಾನು ಬಿಜೆಪಿ ಶಾಸಕರ ಜತೆ ಸೇರಿ ಅಭಿವೃದ್ಧಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದಿದ್ದಾರೆ.

ಇನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿಯ ಜವಾಬ್ದಾರಿ ನನಗೆ ನೀಡಿದರೆ ನಾವೆಲ್ಲ ಜೊತೆಯಾಗಿ ಕೆಲಸ ಮಾಡುತ್ತೇವೆ ಎಂದಿರುವ ಖಾದರ್, ಜನಪರ ಕಾರ್ಯಗಳನ್ನು ನಡೆಸುವ ಹೊಣೆಗಾರಿಕೆಯ ಜವಾಬ್ದಾರಿ ತಮಗೆ ಸಿಕ್ಕಿದೆ. ಹಿರಿಯರ ಸಲಹೆ ಪಡೆದು ಕೆಲಸ ನಿರ್ವಹಿಸುತ್ತೇನೆ. ರಾಜ್ಯ ಸರಕಾರದ ಯೋಜನೆಗಳನ್ನು ಜನರಿಗೆ ತಲುಪುವಂತೆ ಪ್ರಯತ್ನಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com