ನನಗ್ಯಾಕೆ ಸಚಿವ ಸ್ಥಾನ ಕೊಡಲಿಲ್ಲ ಎಂದು ಕೇಳುವ ಹಕ್ಕು ನನಗಿದೆ : ಕಾಂಗ್ರೆಸ್‌ ನಾಯಕ ಶಿವಳ್ಳಿ

ಹುಬ್ಬಳ್ಳಿ : ಹೆಚ್ ಡಿಕೆ ಸಚಿವ ಸಂಪುಟದಲ್ಲಿ ನನಗೆ ಸ್ಥಾನ ಸಿಗುತ್ತೆ ಎಂಬ ಭರವಸೆ ಇತ್ತು. ಉತ್ತರ ಕರ್ನಾಟಕದ ಹಿಂದುಳಿದ ಏಕೈಕ ನಾಯಕ ನಾನು. ಆದರೆ ನನಗೆ  ಸಚಿವ ಸ್ಥಾನ ನೀಡಲಿಲ್ಲ ಎಂದು ಹುಬ್ಬಳ್ಳಿಯಲ್ಲಿ ಕುಂದಗೋಳ ಶಾಸಕ ಸಿ.ಎಸ್ ಶಿವಳ್ಳಿ ಹೇಳಿಕೆ ನೀಡಿದ್ದಾರೆ.

ಸಿ.ಎಸ್ ಶಿವಳ್ಳಿ ಕಾಂಗ್ರೆಸ್ ಪಕ್ಷದ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ನಾಯಕನಾದ ನನಗೆ ಸಚಿವ ಸ್ಥಾನ ಸಿಗದೇ ಹೋದ ಕಾರಣ ಗೊತ್ತಾಗಿಲ್ಲ. ದಕ್ಷಿಣ ಕರ್ನಾಟಕದಲ್ಲಿ ಸಚಿವ ಸ್ಥಾನ ಹಂಚಿಕೆಯಾದಂತೆ, ಉತ್ತರ ಕರ್ನಾಟಕದಲ್ಲೂ ಆಗಬೇಕು. ಕೈ ತಪ್ಪಿದ ಸಚಿವ ಸ್ಥಾನ ಕೊಡಬೇಕೆಂದು ಕಾರ್ಯಕರ್ತರ ಅಭಿಪ್ರಾಯ ಪಟ್ಟಿದ್ದಾರೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಾನು ಕಾಂಗ್ರೆಸ್ ಪಕ್ಷವನ್ನ ಕಟ್ಟಿದ್ದೇನೆ. ಸಚಿವ ಸ್ಥಾನ ಕೈತಪ್ಪಿದ್ದರ ಬಗ್ಗೆ ಕಾರಣ ಕೇಳುವ ಹಕ್ಕು ನಮಗೆ ಇದೆ. ಮತ್ತೆ ಸಚಿವ ಸ್ಥಾನ ಸಿಗುತ್ತೇ ಎಂಬ ಭರವಸೆ ಇದೆ. ಹಿರಿಯ ನಾಯಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ನ್ಯಾಯ ಕೊಡುತ್ತೇವೆಂದು ಹಿರಿಯ ನಾಯಕರು ಭರವಸೆ ನೀಡಿದ್ದಾರೆ ಎಂದು ತಮಗಾದ  ನೋವನ್ನು ಮಾಧ್ಯಮಗಳ ಮುಂದೆ  ತೋಡಿಕೊಂಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com