ಮೌನಕ್ಕೆ ಶರಣಾದ ಅವಧೂತ : HDK ಸಿಎಂ ಆಗ್ತಾರೆ ಎಂದಿದ್ದ ವಿನಯ್‌ ಗುರೂಜಿ ಭಕ್ತರಿಗೆ ನಿರಾಸೆ

ಚಿಕ್ಕಮಗಳೂರು :  ನಡೆದಾಡುವ ದೇವರು ಎಂದೇ ಖ್ಯಾತಿಯಾಗಿರುವ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗೌರಿಗದ್ದೆಯ ಸ್ವರ್ಣ ಪೀಠಿಕಾಪುರ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಇನ್ನು ಆರು ತಿಂಗಳು ಭಕ್ತರಿಗೆ ದರ್ಶನ ನೀಡುವುದಿಲ್ಲ.

ಕಳೆದ ಎಂಟು ವರ್ಷದಿಂದ ಪ್ರತಿ ಗುರುವಾರ ಭಕ್ತರಿಗೆ ದರ್ಶನ ನೀಡುತ್ತಿದ್ದ ಗುರೂಜಿ ಇದೀಗ ಮೌನ ವ್ರತಕ್ಕೆ ಮುಂದಾಗಿದ್ದಾರೆ. ಆರು ತಿಂಗಳು ಗೌಪ್ಯ ಸ್ಥಳದಲ್ಲಿ ಮೌನ ವ್ರತ ನಡೆಸಲಿದ್ದು, ಎಲ್ಲಿರುತ್ತಾರೆಂಬ ಮಾಹಿತಿ ಆಶ್ರಮದ ಸಿಬ್ಬಂದಿಗೂ ತಿಳಿದಿಲ್ಲ.

ಇತ್ತೀಚೆಗೆ ರಾಜಕಾರಣಿಗಳ ಭೇಟಿಯಿಂದ ಗುರೂಜಿ ಸಾಕಷ್ಟು ಸುದ್ದಿಯಾಗಿದ್ದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಗುರೂಜಿಯ ಪಾದಪೂಜೆ ನಡೆಸಿದ್ರೆ, ಸ್ಪೀಕರ್ ರಮೇಶ್ ಕುಮಾರ್ ಗುರೂಜಿಗೆ ಆರತಿ ಬೆಳಗಿದ್ರು. ಇದೆಲ್ಲಾ ಮಾಧ್ಯಮದಲ್ಲಿ ಸುದ್ದಿಯಾದ ಮೇಲೆ ಬರುವ ಭಕ್ತರ ಸಂಖ್ಯೆ ಕೂಡ ಡಬಲ್ ಆಗಿತ್ತು. ತಮ್ಮ ವಿಭಿನ್ನ ಆಲೋಚನೆ, ಮಾತು, ನಡೆತೆಯಿಂದಲೇ ಹೆಚ್ಚು ಮನೆಮಾತಾಗಿರುವ ವಿನಯ್ ಗುರೂಜಿ ತನಗೆ ಪ್ರಚಾರ ಬೇಡವೆಂದರೂ ಸಾಕಷ್ಟು ಪ್ರಚಾರ ಸಿಕ್ಕಿರುವುದರಿಂದ ಮೌನ ವ್ರತಕ್ಕೆ ಮುಂದಾಗಿದ್ದಾರೆ. ಸುದ್ದಿಯಾದ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಭಕ್ತರು ಬೇಸರದಿಂದ ವಾಪಸ್ ಹೋಗುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com