ಮಾಲೀಕನಿಗೆ ಚೆಲ್ಲಾಟ ಆನೆಗೆ ಪ್ರಾಣಸಂಕಟ : ಕೆಲಸಕ್ಕೆ ಕೇರಳದ ಆನೆಯನ್ನು ಕರೆತಂದು ಚಿತ್ರಹಿಂಸೆ

ಚಿಕ್ಕಮಗಳೂರು : ಕಾಡುಪ್ರಾಣಿಗಳನ್ನ ಸರ್ಕಸ್ಸಿನಲ್ಲಾಗಲಿ ಅಥವಾ ದುಡಿಸಿಕೊಳ್ಳುವುದಕ್ಕಾಗಲಿ ಬಳಸುವಂತಿಲ್ಲ ಎಂದು ಸರ್ಕಾರದ ಕಾನೂನಿದ್ದರೂ ಟಿಂಬರ್ ಕೆಲಸಕ್ಕೆ ಕೇರಳದಿಂದ ಆನೆಯನ್ನ ಕರೆಸಿರೋ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಅಕ್ಕ-ಪಕ್ಕ ತಿರುಗದಂತೆ ನಿಂತಲ್ಲೆ ನಿಲ್ಲಿಸಿ ಲಾರಿಯ ಕಂಬಿಗಳಿಗೆ ಕಟ್ಟಿ ಸುಮಾರು 600 ಕಿ.ಮೀ. ಆನೆಯನ್ನ ತಂದ ಪರಿಣಾಮ ಆನೆ ನಿತ್ರಾಣಗೊಂಡಿತ್ತು. ಸ್ಥಳೇಯರು ಹಾಗೂ ಪರಿಸರವಾದಿಗಳು ಏಕಕಾಲದಲ್ಲಿ ನೂರು ಲೀಟರ್ ನೀರು, 30 ಕೆ.ಜಿ. ಅವಲಕ್ಕಿ ತಿನ್ನಿಸಿದ್ದಾರೆ. ತಾಲೂಕಿನ ಸೀತಾಳಯ್ಯನಗಿರಿ ಸಮೀಪದ ಮಂಜುನಾಥ ಕಾಫಿ ಎಸ್ಟೇಟ್‍ನಲ್ಲಿ ದೊಡ್ಡ-ದೊಡ್ಡ ಮರದ ದಿಣ್ಣೆಗಳನ್ನ ಸಾಗಿಸಲು ಆನೆಯನ್ನ ಕರೆತಂದಿದ್ದರು.

ಸ್ಥಳೀಯ ಪರಿಸರವಾದಿಗಳು ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಕಳೆದ ರಾತ್ರಿ ಆರ್‌ಎಫ್‌ಒ  ಶಿಲ್ಪಾ ನೇತೃತ್ವದಲ್ಲಿ ದಾಳಿ ನಡೆಸಿ ಆನೆಯನ್ನ ವಶಪಡಿಸಿಕೊಂಡಿದ್ದಾರೆ. ಲಾರಿ ಹಾಗೂ ಲಾರಿ ಚಾಲಕನನ್ನೂ ವಶಕ್ಕೆ ಪಡೆದಿರೋ ಅಧಿಕಾರಿಗಳು ಲಾರಿ ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯಕ್ಕೆ ಆನೆ ಅರಣ್ಯ ಅಧಿಕಾರಿಗಳ ಆರೈಕೆಯಲ್ಲಿದ್ದು, ಆನೆಯನ್ನ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನಲ್ಲಿರೋ ಆನೆ ಬಿಡಾರಕ್ಕೆ ಬಿಡಬೇಕೆಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com