ನನಗೆ ಡಿಸಿಎಂ ಹುದ್ದೆ ಬೇಕು ಎಂದು ಕೇಳಿಯೇ ಇಲ್ಲ ಎಂದ ಎಂ. ಬಿ ಪಾಟೀಲ್‌ !!

ಬೆಂಗಳೂರು : ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ಸಂಪುಟ ವಿಸ್ತರಣೆ ನಂತರ ಮಾಜಿ ಸಚಿವ ಎಂ.ಬಿ. ಪಾಟೀಲ್ ಗರಂ ಆಗಿದ್ದಾರೆ. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಧಾನಗೊಂಡಿದ್ದ ಪಾಟೀಲ್, ತಾವು ಹುದ್ದೆ ಸಿಕ್ಕಿಲ್ಲವೆಂದು ಅಸಮಧಾನಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಾಂಗ್ರೆಸ್‌ನ ಪ್ರಭಾವಿ ನಾಯಕ ಎಂ.ಬಿ. ಪಾಟೀಲ್ ರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಯಾಗಿದ್ದು, ರಾಹುಲ್ ಜೊತೆಗೆ ಚರ್ಚೆ ನಡೆಸಿದ್ದಾರೆ.
ಬಳಿಕ ಮಾತನಾಡಿರುವ ಅವರು, ನನ್ನ ತಲೆಯಲ್ಲಿ ಏನಿದೆಯೋ ಅದನ್ನು ರಾಹುಲ್ ಗಾಂಧಿಯವರಿಗೆ ಹೇಳಿದ್ದೇನೆ. ಅವರು ಶಾಂತರಾಗಿ ಎಲ್ಲವನ್ನೂ ಕೇಳಿಸಿಕೊಂಡಿದ್ದಾರೆ. ಮತ್ತು ನಾನು ನೀಡಿದ ಮಾಹಿತಿಯಿಂದ ಸಂತೋಷಗೊಂಡಿದ್ದಾರೆ. ಕೆಲವು ಮಾಧ್ಯಮಗಳು ನಾನು ಕೆಲವು ಹುದ್ದೆ ಬಯಸಿದ್ದೇನೆ ಎಂದು ವರದಿ ಮಾಡಿವೆ. ಇದು ಸುಳ್ಳು ಎಂದು ಸ್ಪಷ್ಟ ಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com