ಮತ್ತೊಂದು ಡಿಸಿಎಂ ಸ್ಥಾನ ಸೃಷ್ಠಿ ಮಾಡಲ್ಲ: M.B ಪಾಟೀಲ್‌ಗೆ ಸಿದ್ದರಾಮಯ್ಯ ಪರೋಕ್ಷ ತಿರುಗೇಟು

ಬಾಗಲಕೋಟೆ : ನಾನು ಅತೃಪ್ತ ಶಾಸಕರಿಗೆ ಸ್ಪಂದಿಸಿಲ್ಲ ಅನ್ನೋದು ಊಹಾಪೋಹ. ಅಸಮಾಧಾನವಿರುವ ಎಲ್ಲ ಶಾಸಕರೊಂದಿಗೆ ದಿನಕ್ಕೆ ಎರಡರಿಂದ, ಮೂರು ಸಾರಿ ಮಾತನಾಡ್ತಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬಾದಾಮಿ ಕ್ಷೇತ್ರದ ನೀಲಗುಂದ ಗ್ರಾಮದಲ್ಲಿ ಮಾತನಾಡಿದ ಅವರು, ಅತೃಪ್ತ ಶಾಸಕರೆಲ್ಲರೂ ಸದ್ಯ ಸಮಾಧಾನವಾಗಿದ್ದಾರೆ. ಯಾವುದೇ ರೀತಿಯ ಅಸಮಾಧಾನವಿಲ್ಲ, ಅತೃಪ್ತಿಯಿಲ್ಲ. ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಹೈ ಕಮಾಂಡ್ ಜೊತೆಗೆ ಫೋನ್ ನಲ್ಲಿ ಮಾತನಾಡಿದ್ದೇನೆ‌, ಎಲ್ಲ ಅಸಮಾಧಾನ ಶಮನವಾಗಿದೆ ಎಂದಿದ್ದಾರೆ.

ಮಂತ್ರಿಗಳನ್ನ ಮಾಡಿದ್ದು ಎರಡು ವರ್ಷಕ್ಕೆ. ಮುಂದೆ ಅರ್ಹರಿಗೆ ಮಂತ್ರಿ ಸ್ಥಾನ‌ ನೀಡುತ್ತೇವೆ ಎಂದಿದ್ದಾರೆ. ಎಂ.ಬಿ ಪಾಟೀಲ್ ಡಿಸಿಎಂ ಸ್ಥಾನಕ್ಕೆ ಬೇಡಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಇನ್ನೊಂದು ಡಿಸಿಎಂ ಸ್ಥಾನ ಸೃಷ್ಟಿಯಾಗಲ್ಲ. ಹೈ ಕಮಾಂಡ್ ನಿಂದ ನನಗೆ ಬುಲಾವ್ ಬಂದಿಲ್ಲ, ಅದೆಲ್ಲ ಸುಳ್ಳು ಎಂದಿದ್ದಾರೆ. ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ವಿಚಾರವನ್ನು ರಾಹುಲ್ ‌ಗಾಂಧಿಯವ್ರು ನಿರ್ಧರಿಸುತ್ತಾರೆ. ನಾನು ಯಾರನ್ನು ಶಿಫಾರಸ್ಸು ಮಾಡಲ್ಲ. ರಾಹುಲ್ ಗಾಂಧಿ ನನ್ನ ಕರೆದು ಕೇಳ್ತಾರೆ, ಆವಾಗ ಹೇಳುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com