Cricket : ಫೈನಲ್‍ನಲ್ಲಿ ಭಾರತ ವನಿತೆಯರಿಗೆ ನಿರಾಸೆ : ಬಾಂಗ್ಲಾ ಮಡಿಲಿಗೆ ಚೊಚ್ಚಲ ಏಷ್ಯಾಕಪ್

2018ನೇ ಸಾಲಿನ ಮಹಿಳೆಯರ ಟಿ-20 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಸೋಲಿನ ನಿರಾಸೆ ಅನುಭವಿಸಿದೆ. ಕೌಲಾಲಂಪುರದ ಕಿನ್ರಾರಾ ಅಕಾಡೆಮಿ ಓವಲ್ ಮೈದಾನದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ 3 ವಿಕೆಟ್ ಜಯ ಸಾಧಿಸಿದ ಬಾಂಗ್ಲಾದೇಶ ಚೊಚ್ಚಲ ಬಾರಿಗೆ ಏಷ್ಯಾಕಪ್ ಟ್ರೋಫಿ ಎತ್ತಿ ಹಿಡಿದಿದೆ.

ಟಾಸ್ ಗೆದ್ದ ಬಾಂಗ್ಲಾದೇಶ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ 20 ಓವರುಗಳಲ್ಲಿ 9 ವಿಕೆಟ್ ಕಳೆದುಕೊಂಡು 112 ರನ್ ಮೊತ್ತ ಕಲೆ ಹಾಕಿತು. ಏಕಾಂಗಿ ಹೋರಾಟ ನಡೆಸಿದ ನಾಯಕಿ ಹರ್ಮನ್ ಪ್ರೀತ್ 56 ರನ್ ಗಳಿಸಿ ಸ್ಕೋರ್ ನೂರರ ಗಡಿ ದಾಟುವಲ್ಲಿ ನೆರವಾದರು.

ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ 7 ವಿಕೆಟ್ ನಷ್ಟಕ್ಕೆ 113 ರನ್ ಸೇರಿಸಿ 20ನೇ ಓವರ್ ಕೊನೆಯ ಎಸೆತದಲ್ಲಿ ಗೆಲುವು ದಾಖಲಿಸಿತು. ನಿಗಾರ್ ಸುಲ್ತಾನಾ 27 ಹಾಗೂ ರುಮಾನಾ ಅಹ್ಮದ್ 23 ರನ್ ಬಾರಿಸಿ ಗೆಲುವಿಗೆ ಕಾರಣರಾದರು.

ಬಾಂಗ್ಲಾ ಆಟಗಾರ್ತಿ ರುಮಾನಾ ಅಹ್ಮದ್ ಪಂದ್ಯ ಶ್ರೇಷ್ಟ ಪ್ರಶಸ್ರತಿ ಪಡೆದರೆ, ಭಾರತದ ನಾಯಕಿ ಹರ್ಮನ್ ಪ್ರೀತ್ ಕೌರ್ ಸರಣಿ ಶ್ರೇಷ್ಟ ಪ್ರಶ್ತಿಯನ್ನು ತಮ್ಮದಾಗಿಸಿಕೊಂಢರು.

One thought on “Cricket : ಫೈನಲ್‍ನಲ್ಲಿ ಭಾರತ ವನಿತೆಯರಿಗೆ ನಿರಾಸೆ : ಬಾಂಗ್ಲಾ ಮಡಿಲಿಗೆ ಚೊಚ್ಚಲ ಏಷ್ಯಾಕಪ್

Leave a Reply

Your email address will not be published.

Social Media Auto Publish Powered By : XYZScripts.com